Saturday, May 30, 2026
ಸುದ್ದಿ

ಮುಳಿಯ ಬೆಂಗಳೂರಿನಲ್ಲಿ “ಡೈಮಂಡ್ ಫೆಸ್ಟ್” : ಅತ್ಯಾಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶ-ಕಹಳೆ ನ್ಯೂಸ್

ಬೆಂಗಳೂರು: ಮಣಿಪಾಲ್ ಸೆಂಟರ್‌ನಲ್ಲಿರುವ ಪ್ರತಿಷ್ಠಿತ ಆಭರಣ ಮಳಿಗೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್‌ನಲ್ಲಿ ಇದೇ ಮೇ 28ರಿಂದ “ಡೈಮಂಡ್ ಫೆಸ್ಟ್” ಆರಂಭವಾಗಿದೆ. “ *_The New Diamond Destination_* ” ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾಭರಣ ಪ್ರಿಯರಿಗೆ ವಿಶಿಷ್ಟ ಖರೀದಿ ಅನುಭವವನ್ನು ಒದಗಿಸುತ್ತಿದೆ.
ಉತ್ಸವದ ಅಂಗವಾಗಿ ಪ್ರತಿಯೊಂದು ಖರೀದಿಗೂ ಸೀರೆ, ಸ್ಕ್ರಾಚ್ ಕಾರ್ಡ್ ಸೇರಿದಂತೆ ವಿವಿಧ ಉಡುಗೊರೆಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ, ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ವಿದೇಶ ಪ್ರವಾಸ ಗೆಲ್ಲುವ ಅವಕಾಶವೂ ಲಭ್ಯವಿದೆ.

ಜಾಹೀರಾತು

₹1,00,000 ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಖರೀದಿ ಮಾಡುವ ಗ್ರಾಹಕರಿಗೆ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಹಳೆಯ ಚಿನ್ನವನ್ನು ಹೊಸ ಆಭರಣಗಳಿಗೆ ವಿನಿಮಯ ಮಾಡಿದಲ್ಲಿ ಪ್ರತಿ ಗ್ರಾಂಗೆ ₹100 ಹೆಚ್ಚುವರಿ ಮೌಲ್ಯ ನೀಡಲಾಗುವುದು.
ಇದೇ ವೇಳೆ, ವಜ್ರಾಭರಣಗಳ ಮೇಲೆ 95% ಎಕ್ಸ್‌ಚೇಂಜ್ ಹಾಗೂ 90% ಬೈಬ್ಯಾಕ್ ಸೌಲಭ್ಯವನ್ನು ಸಂಸ್ಥೆ ನೀಡುತ್ತಿದ್ದು, ಹಳೆಯ ಆಭರಣಗಳನ್ನು ಹೊಸ ವಿನ್ಯಾಸಗಳಿಗೆ ಪರಿವರ್ತಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.
ಮದುವೆ ಹಾಗೂ ಹಬ್ಬದ ಸೀಸನ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿನ್ಯಾಸಗಳ ಹಾರಗಳು, ಕಿವಿಯೋಲೆಗಳು, ಉಂಗುರಗಳು ಸೇರಿದಂತೆ ಅನೇಕ ನವೀನ ಚಿನ್ನ ಮತ್ತು ವಜ್ರಾಭರಣಗಳ ವಿಶಾಲ ಸಂಗ್ರಹವನ್ನು ಮುಳಿಯ ಪರಿಚಯಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಮೂಲ್ಯ ಡೈಮಂಡ್ಸ್ ಹಾಗೂ ಕಿಸ್ನ ಡೈಮಂಡ್ & ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್‌ಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಉತ್ಸವವು ಗುಣಮಟ್ಟ ಮತ್ತು ವೈವಿಧ್ಯಮಯ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ.

ಕಾರ್ಯಕ್ರಮವನ್ನು ಖ್ಯಾತ ಸಾರೀ ಬ್ರಾಂಡ್ ರಾಧ್ವಿ ಸಾರೀಸ್ ಮಾಲೀಕರಾದ ಶ್ರೀಮತಿ ರಂಜಿತಾ ಸಿದ್ದೇಶ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಾಸ್ಟರ್ ಶೆಫ್ ಖ್ಯಾತಿಯ ಶ್ರೀಮತಿ ಅವನಿ ಶರ್ಮ ಅವರನ್ನು ಸನ್ಮಾನಿಸಲಾಯಿತು.

ಉತ್ಸವದ ಕುರಿತು ಪ್ರತಿಕ್ರಿಯಿಸಿದ ಮುಳಿಯ ಚೇರ್ಮನ್ ಶ್ರೀ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ, “ದಶಕಗಳಿಂದ ಮುಳಿಯ ಸಂಸ್ಥೆ ಚಿನ್ನಾಭರಣ ಖರೀದಿಗೆ ಗ್ರಾಹಕರ ಪ್ರಥಮ ಆಯ್ಕೆಯಾಗಿದೆ. ನಮ್ಮ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದರು. ಇದೀಗ ವಜ್ರಾಭರಣಗಳಿಗೂ ಮುಳಿಯ ಪ್ರಥಮ ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ‘The New Diamond Destination’ ಧ್ಯೇಯದೊಂದಿಗೆ ಬೆಂಗಳೂರಿನಲ್ಲಿ ನೂತನ ವಜ್ರಾಭರಣ ಸಂಗ್ರಹವನ್ನು ಪರಿಚಯಿಸುತ್ತಿದ್ದೇವೆ. ಹಾಗೂ
ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ವಜ್ರಾಭರಣಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲೇ ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಡೈಮಂಡ್ ಫೆಸ್ಟ್ ಮೂಲಕ ಗ್ರಾಹಕರಿಗೆ ವಿಶೇಷ ಖರೀದಿ ಅನುಭವ ನೀಡಲು ನಾವು ಸಜ್ಜಾಗಿದ್ದೇವೆ,” ಎಂದು ತಿಳಿಸಿದ್ದಾರೆ.

ಸಂಸ್ಥೆಯ ವ್ಯವಸ್ಥಾಪಕ ಶ್ರೀ ಎನ್. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.