BREAKING NEWS:-ಸವಣೂರು ನಜ಼ೀರ್ ಎಂಬಾತನ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಹಿಂದೂ ಸಂಘಟನೆಗಳ ಮಾಹಿತಿಯನ್ನಾಧರಿಸಿ ಬೆಳ್ಳಾರೆ ಪೊಲೀಸರು ದಾಳಿ ಗೋಮಾಂಸ, ಹಾಗು ಹತ್ಯೆಗೆ ಬಳಸಲಾಗಿರುವ ಸಲಕರಣೆಗಳನ್ನು ವಶಕ್ಕೆ-ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ಸವಣೂರಿನ ಮಾಂತೂರು ಸಮೀಪದ ಪಣೆಮಜಲು ಎಂಬಲ್ಲಿ ನಜ಼ೀರ್ ಎಂಬಾತನ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಹಿಂದೂ ಸಂಘಟನೆಗಳ ಮಾಹಿತಿಯನ್ನಾಧರಿಸಿ ಬೆಳ್ಳಾರೆ ಪೊಲೀಸರು ದಾಳಿ ನಡೆಸಿ ಗೋಮಾಂಸ, ಹಾಗು ಹತ್ಯೆಗೆ ಬಳಸಲಾಗಿರುವ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.
ಐವರು ಆರೋಪಿಗಳ ಪೈಕಿ ಸ್ಥಳ ಮಾಲೀಕ ನಜ಼ೀರ್ ಹಾಗು ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಪ್ಪಿಸಿಕೊಂಡಿರುವ ಉಳಿದ ಮೂವರ ಶೋಧಕ್ಕೆ ಬಲೆ ಬೀಸಿದ್ದಾರೆ.
ಈ ಪ್ರದೇಶದಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಿದ್ದು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ











