Friday, May 29, 2026
ಸುದ್ದಿ

ಕಟಪಾಡಿಯಲ್ಲಿ ಎಸ್ ವಿ ಎಸ್ ಶಾಲಾ ಸಭಾಂಗಣ ದಲ್ಲಿ 50 ಮಂದಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸನ್ಮಾನ& ವಿದ್ಯಾರ್ಥಿ ವೇತನ ವಿತರಣೆ-ಕಹಳೆ ನ್ಯೂಸ್

ಸಂಸ್ಕೃತಿ ಮತ್ತು ಸಮಾಧಾನ ದ ಜಗತ್ತಿನ ಒಂದೆ ದೇಶ ಭಾರತ ನಾನು 18 ದೇಶ ತಿರುಗಿ ಅನುಭವ ದಿಂದ ಹೇಳುತ್ತೇನೆ, ಹೆತ್ತವರು ತಮ್ಮ ಮಕ್ಕಳಿಗೆ ಕೇವಲ ಪದವಿ ನೀಡಿದರೆ ಸಾಲದು. ಜೀವನ ಮೌಲ್ಯಗಳನ್ನು, ನಾಡಿನ ಸಂಸ್ಕೃತಿ, ಸಂಸ್ಕಾರ ರಾಷ್ಟ್ರಪ್ರೇಮ ಕಲಿಸಬೇಕು. ಸಮಾಜವನ್ನು ಎದುರಿಸುವ ಕಲೆ ಕಲಿಸಬೇಕು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಹೊರೆಯಾಗದೆ ವರವಾಗುವಂತೆ ಬೆಳೆಸಬೇಕು ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದ್ದಾರೆ. ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ (ರಿ.) ಕಟಪಾಡಿ, ಮಾನ್ಯ ಕಲ್ಚರಲ್ & ಎಜ್ಯುಕೇಷನಲ್ ಫೌಂಡೇಶನ್ (ರಿ.) ಕಟಪಾಡಿ, ಇನ್ವೆಂಜರ್ ಫೌಂಡೇಶನ್ (ರಿ.) ಮಂಗಳೂರು ಇವರ ವತಿಯಿಂದ ಕಟಪಾಡಿ ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನಲ್ಲಿ ಶೈಕ್ಷಣಿಕ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗ್ರಾಮೀಣ ಭಾಗದ ೫೦ ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ,ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.

ಕಟಪಾಡಿ ಎಸ್.ವಿ.ಎಸ್.ವಿದ್ಯಾವರ್ಧಕ ಸಂಘದ ಸಂಚಾಲಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಸತ್ಯೇಂದ್ರ ಪೈ ಮಾತನಾಡಿ, ಮೂರೂ ಸಂಸ್ಥೆಗಳು ಮುಂಬರುವ ದಿನಗಳಲ್ಲೂ ಸಾಧ್ಯವಾದಷ್ಟು ಶೈಕ್ಷಣಿಕ ಆರೋಗ್ಯ ಸಂಬಂಧಿ ನೆರವು ನೀಡಲು ಬದ್ದವಾಗಿದ್ದು ಹೆಚ್ಚುಹೆಚ್ಚು ಸಾಮಾಜಮುಖಿ ಕಾರ್ಯಕದಲ್ಲಿ ತೊಡಗಿಕೊಳ್ಳುವ ಸಂಕಲ್ಪ ಹೊಂದಿದ್ದೇವೆ ಎಂದರು. ಮಾನ್ಯ ಕಲ್ಚರಲ್ & ಎಜ್ಯುಕೇಷನಲ್ ಫೌಂಡೇಶನ್ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಈ ಕೆಲಸ ನಿರಂತರವಾಗಿ ಸಾಗುವಂತಾಗಲಿ ಎಂದರು. ಉದ್ಯಮಿ ಸುನೀಲ್ ಸಾಲ್ಯಾನ್ ಕಡೆಕಾರು, ವಿಜಯ ಕರ್ನಾಟಕ ದಿನ ಪತ್ರಿಕೆಯ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್‌ವಿಎಸ್ ವಿದ್ಯಾವವರ್ಧಕ ಸಂಘದ ಸಂಘದ ಸದಸ್ಯ ಗಣೇಶ್ ಕಿಣಿ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ, ಎಸ್‌ವಿಎಸ್, ಎಸ್‌ವಿಕೆ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾರರಾದ ದೇವೇಂದ್ರ ನಾಯಕ್ ಹಾಗೂ ಸುಜಾ ಜೆ, ನಾಗೇಶ್ ಕಾಮತ್,ರಜಾಕ್ ಪುತ್ತೂರು, ರಮೇಶ್ ಕೋಟ್ಯಾನ್ ದಯಾನಂದ್ ಕೆ ಶೆಟ್ಟಿ ದೆಂದೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಪು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ ಸತ್ಯೇಂದ್ರ ಪೈ, ಜಾನಪದ ಪರಿಷತ್ ಒಮಾನ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಾನಂದ ಕೋಟ್ಯಾನ್ ಕಟಪಾಡಿ, ಸ್ಕೂಲ್ ಲೀಡರ್ ಚಿತ್ರದ ಪ್ರಶಸ್ತಿ ವಿಚೇತ ನಿರ್ದೇಶಕ ರಜಾಕ್ ಪುತ್ತೂರು, ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಸಾಧಕಿ ಅಶ್ವಿನಿ ಸಂದೀಪ್, ಕಾಸರಗೋಡು ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿ ವಿಚೇತ ಪ್ರಕಾಶ್ ಸುವರ್ಣ ಕಟಪಾಡಿ ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ೫೦ ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಕಾಶ್ ಸುವರ್ಣ ಕಟಪಾಡಿ ಅವರು ಬರೆದಿರುವ ಪಂಜುರ್ಲಿ ಕೃತಿಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಸಮರ್ಪಿಸಲಾಯಿತು. ಪತ್ರಕರ್ತ ಪ್ರಕಾಶ್ ಸುವರ್ಣ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ಭಾಸ್ಕರ್ ಕಾಮತ್ ವಂದಿಸಿದರು.