ಮುಳಿಯ ಬೆಂಗಳೂರಿನಲ್ಲಿ “ಡೈಮಂಡ್ ಫೆಸ್ಟ್” : ಅತ್ಯಾಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶ-ಕಹಳೆ ನ್ಯೂಸ್

ಬೆಂಗಳೂರು: ಮಣಿಪಾಲ್ ಸೆಂಟರ್‌ನಲ್ಲಿರುವ ಪ್ರತಿಷ್ಠಿತ ಆಭರಣ ಮಳಿಗೆ ಮುಳಿಯ ಗೋಲ್ಡ್ & ಡೈಮಂಡ್ಸ್ ನಲ್ಲಿ ಇದೇ ಮೇ 28ರಿಂದ “ಡೈಮಂಡ್ ಫೆಸ್ಟ್” ಆರಂಭವಾಗಿದೆ. “Widest Range, Endless Wows!” ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾಭರಣ ಪ್ರಿಯರಿಗೆ ವಿಶಿಷ್ಟ ಅವಕಾಶಗಳನ್ನು ಒದಗಿಸುತ್ತಿದೆ.
ಉತ್ಸವದ ಅಂಗವಾಗಿ ಪ್ರತಿಯೊಂದು ಖರೀದಿಗೂ ಸೀರೆ, ಸ್ಕ್ರಾಚ್ ಕಾರ್ಡ್ ಸೇರಿದಂತೆ ವಿವಿಧ ಉಡುಗೊರೆಗಳನ್ನು ಗೆಲ್ಲುವ ಅವಕಾಶ ನೀಡಲಾಗುತ್ತದೆ. ಜೊತೆಗೆ, ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ವಿದೇಶ ಪ್ರವಾಸ ಗೆಲ್ಲುವ ಅವಕಾಶವೂ ಲಭ್ಯವಿದೆ.
₹1,00,000 ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಖರೀದಿ ಮಾಡಿದ ಗ್ರಾಹಕರಿಗೆ ಚಿನ್ನದ ನಾಣ್ಯ ಉಡುಗೊರೆಯಾಗಿ ನೀಡಲಾಗುತ್ತದೆ. ಹಳೆಯ ಚಿನ್ನವನ್ನು ಹೊಸ ಆಭರಣಗಳಿಗೆ ವಿನಿಮಯ ಮಾಡಿದಲ್ಲಿ ಪ್ರತಿ ಗ್ರಾಂಗೆ ₹100 ಹೆಚ್ಚುವರಿ ಮೌಲ್ಯ ನೀಡಲಾಗುವುದು.
ಇದೇ ವೇಳೆ, ವಜ್ರಾಭರಣಗಳ ಮೇಲೆ 95% ಎಕ್ಸ್‌ಚೇಂಜ್ ಹಾಗೂ 90% ಬೈಬ್ಯಾಕ್ ಸೌಲಭ್ಯವನ್ನು ಸಂಸ್ಥೆ ನೀಡುತ್ತಿದ್ದು, ಹಳೆಯ ಆಭರಣಗಳನ್ನು ಹೊಸ ವಿನ್ಯಾಸಗಳಿಗೆ ಪರಿವರ್ತಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.
ಮದುವೆ ಹಾಗೂ ಹಬ್ಬದ ಸೀಸನ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿನ್ಯಾಸಗಳ ಹಾರಗಳು, ಕಿವಿಯೋಲೆಗಳು, ಉಂಗುರಗಳು ಸೇರಿದಂತೆ ಅನೇಕ ನವೀನ ಚಿನ್ನ ಮತ್ತು ವಜ್ರಾಭರಣಗಳ ವಿಶಾಲ ಸಂಗ್ರಹವನ್ನು ಮುಳಿಯ ಪರಿಚಯಿಸಿದೆ.
ಅಮೂಲ್ಯ ಡೈಮಂಡ್ಸ್ ಮತ್ತು ಕಿಸ್ನ ಡೈಮಂಡ್ & ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್‌ಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಉತ್ಸವವು ಗುಣಮಟ್ಟ ಮತ್ತು ವೈವಿಧ್ಯಮಯ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ.
ಕಾರ್ಯಕ್ರಮವನ್ನು ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಮತಿ ರಂಜಿತಾ ಉದ್ಘಾಟನೆ ಮಾಡುವ ಮೂಲಕ ಶುಭ ಹಾರೈಸಿದರು ಹಾಗೂ ಕಾರ್ಯಕರ್ಮದಲ್ಲಿ ಮಾಸ್ಟರ್ ಶೆಫ್ ಖ್ಯಾತಿಯ ಶ್ರೀಮತಿ ಅವನಿ ಶರ್ಮ ಅವರನ್ನು ಸನ್ಮಾನಿಸಲಾಯಿತು.
ಉತ್ಸವದ ಕುರಿತು ಪ್ರತಿಕ್ರಿಯಿಸಿದ ಮುಳಿಯ ಚೇರ್ಮನ್ ಶ್ರೀ ಕೇಶವ ಪ್ರಸಾದ್ ಮುಳಿಯ ಅವರು,
“ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ವಜ್ರಾಭರಣಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲೇ ಒದಗಿಸುವುದು ನಮ್ಮ ಉದ್ದೇಶ. ಈ ಡೈಮಂಡ್ ಫೆಸ್ಟ್ ಮೂಲಕ ಗ್ರಾಹಕರಿಗೆ ವಿಶೇಷ ಖರೀದಿ ಅನುಭವ ನೀಡಲು ನಾವು ಸಜ್ಜಾಗಿದ್ದೇವೆ,” ಎಂದು ತಿಳಿಸಿದ್ದಾರೆ. ಸಂಸ್ಥೆಯ ವ್ಯವಸ್ತಾಪಕ ಶ್ರೀ ಯನ್ ಸುಬ್ರಹ್ಮಣ್ಯ ಭಟ್ ಅವರು ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










