Saturday, May 23, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮೇ 24 ರಂದು ಮುಲ್ಕಿಯಲ್ಲಿ ಕೋಸ್ಟಲ್ ಫಿಲಂ ಅವಾರ್ಡ್ಸ್ 2026 – ಕಹಳೆ ನ್ಯೂಸ್

ಮಂಗಳೂರು: ಸತತ 5ನೇ ಬಾರಿಗೆ ಸ್ಯಾಂಡಿಸ್ ಕಂಪನಿ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಡ್ ಆವಾಡ್ಸ್ 9 2026 ಮೇ 24 ರಂದು ಭಾನುವಾರ ಸಂಜೆ 3:00ಗೆ ಮುಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನನಲ್ ಸೆಂಟರ್ ಕೋಲ್ನಾಡ್ ಇಲ್ಲಿ ಸಂದೇಶ ರಾಜ್ ಬಂಗೇರ ಇವರ ಸಾರಥ್ಯದಲ್ಲಿ ಆದ್ದೂರಿಯಾಗಿ ನಡೆಯಲಿದೆ.

ತಾರೆಯರಾದ ಸೋನಾಲ್ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಖ್ಯಾತ ನಿದೇಶಕ ಸುಧೀರ್, ಮೊಂತೆರೋ, ನಿರ್ಮಾಪಕಿ ಶಿಲ್ಪಾ ಗಣೇಶ್, ನಟ ತ್ರಿವಿಕ್ರಮ ಹಾಗೂ ತುಳು ಚಿತ್ರರಂಗದ ದಿಗ್ಗಜ ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ಹಿರಿಯ ಮತ್ತು ಕಿರಿಯ ನಟ ನಟಿಯರು ಮತ್ತು ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಅಲ್ಲದೆ ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಎ ಕೋಟ್ಯಾನ್, ಮೈಂಡ್ ಮೆಕ್ಯಾನಿಸಂ ಸ್ಥಾಪಕರಾದ ಶ್ರೀನಾಥ ಶೆಟ್ಟಿ, ಅಸ್ತ್ರ ಗ್ರೂಪ್ ಸ್ಥಾಪಕರಾದ ತರುಣ್ ಲಂಚುಲಾಲ್ ಕೆ ಎಸ್, ಮಾಜಿ ಸಚಿವರಾದ ಕೃಷ್ಣ ಜೆ ಪಾಲೇಮಾರ್ ಇನ್ನಿತರರು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಎಂದು ಸ್ಯಾಂಡಿಸ್ ಕಂಪನಿಯ ಮಾಲಕ ಸಂದೇಶ್ ರಾಜ್ ಬಂಗೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಳು ಚಿತ್ರರಂಗದ ನಟ ನಟಿಯರಿಂದ, ಮತ್ತು ಸಿಸಿಲಿಂಗ್ ಗಾಯ್ಸ್ ತಂಡದಿಂದ ಅದ್ಭುತ ನೃತ್ಯ, ರಸಮಂಜರಿ ಹಾಗೂ ಕಾಮಿಡಿ ಕಾರ್ಯಕ್ರಮ ನಡೆಯಲಿದೆ. ಪ್ರಸಿದ್ದ ನಿರೂಪಕರಾದ ಶರ್ಮಿಳಾ ಅಮೀನ್ ಮತ್ತು ವಿನೀತ್ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಸಿನಿಮಾರಂಗದಲ್ಲಿ ಸಾಧನೆಗೈದ ಡಾ. ದೇವದಾಸ ಕಾಪಿಕಾಡ್, ಸರೋಜಿನಿ ಶೆಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಈ ಬಾರಿ 2025 ರಲ್ಲಿ ತೆರೆಕಂಡಿರುವ ಒಟ್ಟು 8 ಸಿನಿಮಾಗಳು ಸ್ಪರ್ಧೆಗೆ ಬಂದಿವೆ. ಲೈಫ್ ಟೈಮ್ ಅಚೀವೆಂಟ್ ಅವಾರ್ಡ್ ಹಾಗೂ ವರ್ಸಟೈಲ್ ಆಕ್ಟರ್ ಅವಾಡ್9 ಸೇರಿ ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಹಾಗೂ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಸಚಿನ್ ಉಪ್ಪಿನಂಗಡಿ, ಯಶ್ ರಾಜ್ ಉಪಸ್ಥಿತರಿದ್ದರು.