Monday, May 18, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು ಗರ್ಭಗುಡಿಗೆ ಸಿಡಿಲು ಬಡಿತ; ಕೋಟ್ಯಂತರ ರೂ. ಹಾನಿ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನಲ್ಲಿ ರಂದು ಮೇ 16 ಸಂಜೆ ಸುರಿದ ಭಾರೀ ಗಾಳಿ-ಮಳೆಯ ಜೊತೆಗಿನ ಸಿಡಿಲಿನ ಆರ್ಭಟಕ್ಕೆ ಮಣಿನಾಲ್ಕೂರಿನ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಯ ಪ್ರಾಕಾರ ಛಿದ್ರಗೊಂಡು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿ ಪ್ರಾಕಾರ ಛಿದ್ರ – 1 ಕೋಟಿ ರೂ.ಗೂ ಅಧಿಕ ನಷ್ಟ! ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಎಂಬಲ್ಲಿ ಇಂದು ಸಂಜೆ ಸುಮಾರು 4.30 ರ ವೇಳೆಗೆ ಸುರಿದ ಭಾರೀ ಗಾಳಿ-ಮಳೆಗೆ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ನೇರವಾಗಿ ಸಿಡಿಲು ಬಡಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿಡಿಲಿನ ತೀವ್ರತೆಗೆ ಗರ್ಭಗುಡಿಯ ಮೇಲ್ಭಾಗದ ಪ್ರಾಕಾರದ ಶಿಲಾ ಕಂಬಗಳು ಮತ್ತು ಮೇಲ್ಛಾವಣಿಯ ಕಲ್ಲುಗಳು ಸಂಪೂರ್ಣವಾಗಿ ಛಿದ್ರಗೊಂಡು ನೆಲಕ್ಕಪ್ಪಳಿಸಿವೆ. ಕಲ್ಲಿನ ಕಂಬಗಳು ಬಿರುಕು ಬಿಟ್ಟು ಕುಸಿದಿದ್ದು, ಮೇಲ್ಛಾವಣಿಯ ಮರದ ತೊಲೆಗಳು ಹೊರಗಾಣಿಸುವಂತೆ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 1 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎನ್ನಲಾಗಿದೆ.

ವಿಶೇಷವೆಂದರೆ, ಕಳೆದ 4 ವರ್ಷಗಳ ಹಿಂದೆಯಷ್ಟೇ ಈ ದೇವಸ್ಥಾನವನ್ನು ಸಂಪೂರ್ಣವಾಗಿ ನವೀಕರಿಸಿ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಇದೀಗ ಮತ್ತೆ ಗರ್ಭಗುಡಿಗೆ ಅಪಾರ ಹಾನಿಯಾಗಿದ್ದು, ಪುನರ್ ನವೀಕರಣಕ್ಕೆ ಭಾರಿ ಮೊತ್ತದ ವೆಚ್ಚ ತಗಲಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಸಂಜೆ ವೇಳೆ ಸುರಿದ ಗಾಳಿ-ಮಳೆಯ ನಡುವೆ ಭೀಕರ ಸಿಡಿಲಿನ ಅಬ್ಬರ ಕೇಳಿಬಂದಿದ್ದು, ಅದು ದೇವಸ್ಥಾನಕ್ಕೆ ಅಪ್ಪಳಿಸಿದೆ. ಘಟನೆಯ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾನಿಯ ನಿಖರ ವಿವರಗಳ ಕುರಿತು ದೇವಸ್ಥಾನ ಆಡಳಿತ ಮಂಡಳಿ ಪರಿಶೀಲನೆ ನಡೆಸುತ್ತಿದೆ.

ಭಕ್ತಾದಿಗಳಲ್ಲಿ ಆತಂಕ: ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು, ಭಕ್ತರು. ಬಂಟ್ವಾಳ ತಾಲೂಕಿನ ಪ್ರಮುಖ ದೇವಸ್ಥಾನಕ್ಕೆ ಸಿಡಿಲು ಬಡಿದಿರುವುದು ಭಕ್ತಾದಿಗಳಲ್ಲಿ ಮತ್ತು ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಾನಿಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಪಾರ ಸಂಖ್ಯೆಯ ಭಕ್ತರು ಹಾಗೂ ಗ್ರಾಮಸ್ಥರು ದೌಡಾಯಿಸುತ್ತಿದ್ದಾರೆ. ಇಳಿಯೂರು ದೇವಸ್ಥಾನದ ಆಡಳಿತ ಮಂಡಳಿಯು ಮುಂದಿನ ಪುನರ್ನಿರ್ಮಾಣ ಹಾಗೂ ಧಾರ್ಮಿಕ ಕ್ರಮಗಳ ಕುರಿತು ತುರ್ತು ಚರ್ಚೆ ಆರಂಭಿಸಿದೆ.
ಸಿಡಿಲಿನ ತೀವ್ರ ಬಡಿತಕ್ಕೆ ಗರ್ಭಗುಡಿಯ ಮೇಲ್ಭಾಗದ ಪ್ರಾಕಾರದ ಶಿಲಾ ಕಂಬಗಳು ಮತ್ತು ಮೇಲ್ಛಾವಣಿಯ ಕಲ್ಲುಗಳು ಛಿದ್ರಗೊಂಡು ನೆಲಕ್ಕಪ್ಪಳಿಸಿವೆ. ಚಿತ್ರದಲ್ಲಿ ಕಾಣುವಂತೆ, ಕಲ್ಲಿನ ಕಂಬಗಳು ಬಿರುಕು ಬಿಟ್ಟು ಕುಸಿದಿದ್ದು, ಮೇಲ್ಛಾವಣಿಯ ಮರದ ತೊಲೆಗಳು ಕಾಣಿಸುತ್ತಿವೆ. ಸುಮಾರು 1 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

ಅಪಾರ ಹಾನಿಯಿಂದ ಭಕ್ತಾದಿಗಳಲ್ಲಿ ಆತಂಕ ಮನೆಮಾಡಿದ್ದು, ದೇವಸ್ಥಾನ ಆಡಳಿತ ಮಂಡಳಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸುತ್ತಿದೆ.