ಗೋವಿಗಾಗಿ ಮೇವು : ಪುತ್ತೂರು ಗೋಶಾಲೆಗೆ ವಿಹಿಂಪ-ಬಜರಂಗದಳದಿಂದ ಹಸಿರು ಮೇವು ವಿತರಣೆ -ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ವತಿಯಿಂದ ಗೋವಿಗಾಗಿ ಮೇವು ಎಂಬ ಕಾರ್ಯಕ್ರಮದ ಮೂಲಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆಗೆ ಹಸಿರು ಮೇವನ್ನು ನೀಡಲಾಯಿತು. ತಿಂಗಳಾಡಿ ಮತ್ತು ಭಕ್ತಕೋಡಿ ಘಟಕದ ಕಾರ್ಯಕರ್ತರು ಮೇವು ಸಂಗ್ರಹ ಮಾಡಿದರು. ವೈಷ್ಣವ್ ನೆಲಪ್ಪಾಲು ಅವರು ಪಿಕಪ್ ಒದಗಿಸಿದರು ಹಾಗೂ ಪುತ್ತೂರಿನ ಮಾಸ್ಟರ್ಸ್ ಸಂಸ್ಥೆಯ ಸವನೂರಿನಲ್ಲಿರುವ ಫಾರ್ಮ್ ಹೌಸ್ ತೋಟದಿಂದ ಮೇವು ಸಂಗ್ರಹಿಸಲು ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಕೃಷ್ಣ ಪ್ರಸನ್ನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್, ಗ್ರಾಮಾಂತರ ಪ್ರಖಂಡದ ಅಧ್ಯಕ್ಷರಾದ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿಯಾದ ಸಹದೇವ, ನಗರ ಪ್ರಖಂಡ ಅಧ್ಯಕ್ಷರಾದ ದಾಮೋದರ ಪಾಟಲಿ, ಸಹಕಾರ್ಯದರ್ಶಿಯಾದ ಸೇಸಪ್ಪ ಬೆಳ್ಳಿಪ್ಪಾಡಿ ಮತ್ತು ನಗರ, ಗ್ರಾಮಾಂತರ ಪ್ರಖಂಡದ ಪ್ರಮುಖರು ಉಪಸ್ಥಿತರಿದ್ದರು.









