Friday, April 24, 2026
ಸುದ್ದಿ

ಮಂಗಳೂರು : ಎರಡು ಕಿಮೀ ಚಾಲನೆ ಮೂಲಕ ಮಂಗಳೂರು–ಮಂತ್ರಾಲಯ ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಸ್ಲೀಪರ್ ಬಸ್‌ಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ-ಕಹಳೆ ನ್ಯೂಸ್

ಕೆಎಸ್ಆರ್‌ಟಿಸಿಯಿಂದ ನಾಲ್ಕು ನಾನ್ ಎಸಿ ಸ್ಲೀಪರ್ ಬಸ್‌ ಮಂತ್ರಾಲಯದೆಡೆಗೆ ಸಂಚಾರ ಆರಂಬಿಸಿದ್ದು, ಈ ಬಸ್ ಕೇವಲ 12ಗಂಟೆಗಳಲ್ಲಿ ಮಂತ್ರಾಲಯ ತಲುಪಲಿದೆ‌. ಈ ಮೂಲಕ ಮಂತ್ರಾಲಯ ಮಂಗಳೂರಿಗರಿಗಿನ್ನು ಬಹಳ ಹತ್ತಿರವಾಗಲಿದೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಬಸ್‌ಗಳಿಗೆ ಚಾಲನೆ ನೀಡಿದರು. ಈ ಬಸ್ ಉಡುಪಿ – ಶಿವಮೊಗ್ಗ – ಚಿತ್ರದುರ್ಗ – ಬಳ್ಳಾರಿ – ಅದೋನಿ ಮಾರ್ಗವಾಗಿ ಮಂತ್ರಾಲಯ ತಲುಪಲಿದೆ. ಮಂಗಳೂರಿನಿಂದ 1500 ರೂ‌., ಉಡುಪಿಯಿಂದ 1450 ಹಾಗೂ ಕುಂದಾಪುರದಿಂದ 1400 ರೂ. ಪ್ರಯಾಣ ದರ ಇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಾನ್ ಎಸಿ ಪಲ್ಲಕ್ಕಿ ಬಸ್‌ನಲ್ಲಿ ಗ್ರಾಹಕರಿಗಾಗಿ ವಿವಿಧ ಸೌಕರ್ಯಗಳನ್ನು ನೀಡಲಾಗಿದೆ. 30 ಆಸನಗಳುಳ್ಳ ಈ ಬಸ್‌ಗಳಲ್ಲಿ ಅಡ್ವಾನ್‌ಸ್ಡ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್ ಇದೆ. ಫ್ರಂಟ್ ಡ್ಯಾಶ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಕ್ಯಾಮೆರಾ, ಬಸ್‌ಗಳ ಒಳಭಾಗದಲ್ಲಿ ಕ್ಯಾಮೆರಾ, ಆಸನದ ಮೇಲ್ಭಾಗದಲ್ಲಿ ಎಲ್‌ಐಡಿ ಲೈಟ್‌ಗಳು, ಪ್ಯಾನಿಕ್ ಬಟನ್, ಫೈರ್ ಸೇಪ್ಟಿ, ಯುಎಸ್‌ಬಿ ಮತ್ತು ಟೈಪ್ ಸಿ ಮೊಬೈಲ್ ಚಾರ್ಜರ್ ಸೇರಿದಂತೆ ವಿವಿಧ ಸೌಕರ್ಯ ನೀಡಲಾಗಿದೆ.‌