
ಚಾಮರಾಜನಗರ: ಮುಳ್ಳುಹಂದಿ ಬೇಟೆಯಾಡಲು ಹೋಗಿ ಚಿರತೆ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಬಳಿ ನಡೆದಿದೆ.
ಮುಳ್ಳುಹಂದಿ ಬೇಟೆಗೆ ಚಿರತೆ ಮುಂದಾಗಿದೆ. ಈ ವೇಳೆ, ಚಿರತೆ ಕಾಲು ಹಾಗೂ ಬಾಯಿಯ ಭಾಗಕ್ಕೆ ಮುಳ್ಳು ಚುಚ್ಚಿಕೊಂಡಿದೆ. ಮುಳ್ಳುಹಂದಿ ಜೊತೆ ಕಾದಾಡಿ ಚಿರತೆ ಮೃತಪಟ್ಟಿದೆ.
ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.









