Sunday, August 2, 2026
ಸುದ್ದಿ

ಪುತ್ತೂರಿನ ಪುರಭವನದಲ್ಲಿ ಪ್ರಪ್ರಥಮ ಬಾರಿಗೆ ಮಂದಾರ ತಂಡದವರಿಂದ ಏ.4ರಂದು ಬಹು ನಿರೀಕ್ಷೆಯ ಮಾಯೊದ ತುಡರ್ ನಾಟಕ ಪ್ರದರ್ಶನ- – ಕಹಳೆ ನ್ಯೂಸ್

ಮಂದಾರ ಕಲಾವಿದರು ಉಜಿರೆ ನಾಟಕ ತಂಡ ಆರಿಕೋಡಿಯ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡು ಪ್ರಶಸ್ತಿ ಪಡೆದಿರುವ ಹೆಮ್ಮೆಯ ಕಲಾ ತಂಡವಾಗಿದೆ. ತುಳುನಾಡಿನ ಹೆಸರಾಂತ ಕಲಾವಿದರು ಪುತ್ತೂರು ತಾಲೂಕಿನ ಕುಂಬ್ರದ ಹೆಸರಾಂತ ಕಲಾವಿದರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆಗಿರುವ ರಂಗ್ ದ ರಾಜೆ ಲ.ಸುಂದರ್ ರೈ ಮಂದಾರ ಇವರ ಶಿಷ್ಯರು ಕಲಾ ಜೀವನದ ಕಾಣಿಕೆಯಾಗಿ ಗುರುಗಳ ಹೆಸರಿನಲ್ಲಿ ರಚಿಸಿದ ನಾಟಕ ತಂಡವಾಗಿದೆ.

2022 ರಲ್ಲಿ ಮಂದಾರ ಪ್ರಶಸ್ತಿ ಎನ್ನುವ ಹೆಸರಿನಿಂದ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯನ್ನು ಆಯೋಜಿಸಿ, ತುಳು ರಂಗಭೂಮಿಯ ಹೆಸರಾಂತ ಕಲಾವಿದರನ್ನು ಆಮಂತ್ರಿಸಿ ಈ ನಾಟಕ ಸ್ಪರ್ಧೆಯು ಕಲಾಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದಂತೆ ಮಾಡಿದ ಹೆಮ್ಮೆ ನಮ್ಮ ಮಂದಾರ ತಂಡಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

2024ರ ನವೆಂಬರ್ ನಲ್ಲಿ ತಂಡದ ಸಾರಥಿ ಮಾಡಾವಿನ ಗುಣಪಾಲ್ ಎಂ.ಎಸ್ ಇವರ ಕಥೆ/ಸಂಭಾಷಣೆಯ ಮತ್ತು ಕಲಾ ಜೀವನದ ಗುರುಗಳಾದ ಸುಂದರ್ ರೈ ಮಂದಾರ ಇವರ ನಿರ್ದೇಶನದ ತುಳು ಭಕ್ತಿ ಪ್ರಧಾನ ಹಾಸ್ಯಮಯ ಮಾಯೊದ ತುಡರ್ ನಾಟಕ ತುಳು ರಂಗಭೂಮಿಯಲ್ಲಿ ಕಲಾಭಿಮಾನಿಗಳಿಂದ ಪ್ರಶಂಸಿಸಲ್ಪಟ್ಟ ಈ ವರ್ಷದ ಸೂಪರ್ ಹಿಟ್ ನಾಟಕವಾಗಿ ಮೂಡಿಬಂದಿದೆ. ಈ ನಾಟಕವನ್ನು ತಾಲೂಕು,ಜಿಲ್ಲೆ, ಅಂತರ್ ಜಿಲ್ಲೆ ಹಾಗೂ ಗಡಿನಾಡ ಪ್ರದೇಶಗಳಲ್ಲಿ ಪ್ರದರ್ಶನ ಮಾಡಿದ ಹೆಮ್ಮೆ ನಮ್ಮ ಮಂದಾರ ತಂಡಕ್ಕಿದೆ.

ಸಹೃದಯಿ ಕಲಾ ಪೋಷಕರೇ…. ನಿಮ್ಮಲ್ಲಿ ನಮ್ಮದೊಂದು ಮನವಿ….

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾ ಕ್ಷೇತ್ರ, ಕಲಾ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಪುತ್ತೂರಿನ ಒಡೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸಂಪೂರ್ಣ ಆಶೀರ್ವಾದ ಇದೆ.

ಮಂದಾರ ತಂಡ ಪುತ್ತೂರಿನ ಪುರಭವನದಲ್ಲಿ ಏಪ್ರಿಲ್ 4 ನೇ ಶನಿವಾರ ಸಂಜೆ 7 ಗಂಟೆಗೆ ಬಹು ನಿರೀಕ್ಷೆಯ ಮಾಯೊದ ತುಡರ್ ನಾಟಕ ಪ್ರದರ್ಶನ ಮಾಡುವುದಾಗಿ ತೀರ್ಮಾನಿಸಿದ್ದೇವೆ. ಇದು ನಮ್ಮ ಬಹು ದಿನಗಳ ಕನಸು ಕೂಡ ಆಗಿದೆ.

ಸಹೃದಯಿ ಕಲಾಭಿಮಾನಿಗಳು ಮಂದಾರ ಕಲಾವಿದರು ಉಜಿರೆ ಇವರ ಉಚಿತ ಪ್ರವೇಶದ ಮಾಯೊದ ತುಡರ್ ನಾಟಕ ಪ್ರದರ್ಶನದ ವೀಕ್ಷಣೆಗೆ ಆಗಮಿಸಿ ತಂಡಕ್ಕೆ ಇನ್ನಷ್ಟು ಕಲಾ ಕ್ಷೇತ್ರದಲ್ಲಿ ಅವಕಾಶ ಸಿಗಲು ಶುಭ ಹಾರೈಸಬೇಕಾಗಿ ವಿನಂತಿ