Friday, April 24, 2026
ಸುದ್ದಿ

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಕ್ಷೇತ್ರದಲ್ಲಿ ಇಂದಿನ ಧಾರ್ಮಿಕ, ವೈದಿಕ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಏನೇನು… ? – ಕಹಳೆ ನ್ಯೂಸ್ 

ಬೆಳಗ್ಗೆ 7ರಿಂದ ವೈದಿಕ ಕಾರ್ಯಕ್ರಮಗಳು ಆರಂಭ, ಚಂಡಿಕಾಯಾಗ, ಮಧ್ಯಾಹ್ನ ಪೂಜೆ, ಸಂಜೆ 5ರಿಂದ ಅಂಕುರ ಪೂಜೆ, ರಾತ್ರಿ ಪೂಜೆ, ಶ್ರೀ ದುರ್ಗಾಪೂಜೆ, ಅನುಜ್ಞಾಕಲಶ ಪೂರಣೆ, ಅಧಿವಾಸಹೋಮ ನಡೆಯಲಿದೆ. ಬೆಳಗ್ಗೆ 8.30ರಿಂದ ಭಜನೆ ಕನ್ಯಾನ ಮತ್ತು ಕುರುಡಪದವು ತಂಡಗಳಿಂದ, ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಶಿವಭಕ್ತ ವೀರಮಣಿ. ಮಧ್ಯಾಹ್ನ 2.30ರಿಂದ ನಯನಗೌರಿ ಸೇರಾಜೆ ಮತ್ತು ಬಳಗದ ಸುಗಮ ಸಂಗೀತ ನಡೆಯಲಿದೆ.

ಸಂಜೆ 4.30ರಿಂದ ಸುಧರ್ಮ ಸಭೆ, ಮಾತೃಸಂಗಮ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಲಿದ್ದಾರೆ. ಕರೋಪಾಡಿ ಗ್ರಾಪಂ ಅಧ್ಯಕ್ಷೆ ಸೂರ್ಯಕಾಂತಿ ದೀಪಪ್ರಜ್ವಲನ ಮಾಡುವರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ದೆಹಲಿಯ ವಾಗ್ಮಿ ಕಾಜಲ್ ಹಿಂದುಸ್ತಾನಿ ಧಾರ್ಮಿಕ ಉಪನ್ಯಾಸ ನೀಡುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್, ಬೆಂಗಳೂರಿನ ಸುಮನಾ ಫೌಂಡೇಶನ್ ಅಧ್ಯಕ್ಷೆ ಡಾ. ಸುನಿತಾ ಮಂಜುನಾಥ, ಪತ್ರಕರ್ತೆ ಶೋಭಾ ಮಳವಳ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಪಂ ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಕೊಂಕೋಡಿ, ಯಮುನಾ ಬೋರ್ ವೆಲ್ಸ್ ಮಾಲಕಿ ಕಾವ್ಯ ಕೃಷ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ ಪುತ್ತೂರು, ಕನ್ಯಾನ ಗ್ರಾಪಂ ಅಧ್ಯಕ್ಷೆ ರೇಖಾ ರಮೇಶ್ ಪಂಜಾಜೆ ಆಹ್ವಾನಿತ ಮುಖ್ಯ ಅತಿಥಿಗಳಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ 7ರಿಂದ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಮತ್ತು ವಿದುಷಿ ಚೈತ್ರ ಈಶಾನ್ಯ ಪದ್ಯಾಣ ಅವರ ನಿರ್ದೇಶನದಲ್ಲಿ ಪದಯಾನ ತಂಡದ ನೃತ್ಯಾಂಜಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ರಿಂದ ಶಿವಸಂಭೂತ ನೃತ್ಯ ನಾಟಕ ಲಕ್ಷ್ಮೀ ಗುರುರಾಜ್ ಉಡುಪಿ ನಿರ್ದೇಶನದಲ್ಲಿ ನಡೆಯಲಿದೆ.