Thursday, April 23, 2026
ಸುದ್ದಿ

ಪದ್ಯಾಣ ದೇವಾಲಯದ ಬ್ರಹ್ಮಕಲಶೋತ್ಸವ : ಪುತ್ತೂರಿನಲ್ಲಿ ಹೊರಕಾಣಿಕೆ ಸಂಗ್ರಹ ಕಛೇರಿ ಉದ್ಘಾಟನೆ- ಕಹಳೆ ನ್ಯೂಸ್ 

ಪುತ್ತೂರು : ಮಾರ್ಚ್ 30 ರಿಂದ ಏಪ್ರಿಲ್ 6 ತನಕ ವಿಜೃಂಭಣೆಯಿಂದ ನಡೆಯಲಿರುವ ಬಂಟ್ವಾಳ ತಾಲೂಕಿನ ಕರೋಪಾಡಿ – ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪುನ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆ ಬಳಿಯ ಹಿಂದೂ ಜಾಗರಣಾ ವೇದಿಕೆ ಕಛೇರಿ ಯನ್ನೇ ಹಸಿರು ಹೊರೆ ಕಾಣಿಕೆ ಸಂಗ್ರಹ ಕಛೇರಿಯನ್ನಾಗಿ ಮಾ.25 ರಂದು ಪರಿವರ್ತನೆ ಮಾಡಿ , ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಲಾಯಿತು.

ಹಿರಿಯರು , ಖ್ಯಾತ ವೈದ್ಯರೂ ಆದ ಡಾ.ಎಂ.ಕೆ. ಪ್ರಸಾದ್ ಭಂಡಾರಿ ಇವರು ದೀಪ ಪ್ರಜ್ವಲನೆ ಮೂಲಕ ನೂತನ ಕಚೇರಿಯನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ಮಾತನಾಡಿ , ದೇವಾಲಯದ ಸಮಿತಿ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ. ಬರುವಂತಹ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನು ಕೂಡ ಅಚ್ಚುಕಟ್ಟಾಗಿ ಒದಗಿಸುವೆವು. ಕಾರ್ಯಕ್ರಮವನ್ನು ಯಶಸ್ವಿಗೊಳಿಸೋದು ನಮ್ಮೆಲ್ಲರ ಕರ್ತವ್ಯವಾಗಿದ್ದು , ಭಕ್ತರೆಲ್ಲರೂ ಕೈ ಜೋಡಿಸಿ , ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕಾರ ನೀಡಿಯೆಂದು ವಿನಂತಿಸಿಕೊಂಡರು.

ವೈದ್ಯರಾದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ , ಧಾರ್ಮಿಕ ಕಾರ್ಯಕ್ರಮದ ಯಶಸ್ವಿಗೆ ಯಾವುದೇ ರೀತಿಯ ಭೇದ ಭಾವನೆಯನ್ನು ತೋರದೆಯೇ , ಹೊರೆಕಾಣಿಕೆ ಮೆರವಣಿಗೆ ಭವ್ಯವಾಗಿ ನಡೆಯಲಿಯೆಂದು ಹೇಳಿದರು. ಉದ್ಯಮಿ ಉಜ್ವಲ್ ಪ್ರಭು ಮಾತನಾಡಿ , ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಇವರು ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಸಂಚಾಲಕರಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಕೊಟ್ಟಿರುವಂತಹ ಜವಾಬ್ದಾರಿ ಯನ್ನು ಪ್ರಾಮಾಣಿಕ ರೀತಿ ಶ್ರದ್ಧೆಯಿಂದ ನಿರ್ವಹಿಸಿದ್ದೇನೆ. ನಾವೆಲ್ಲರೂ ಹಿಂದೂಗಳಾಗಿ ಹುಟ್ಟಿದವರು. ಪದ್ಯಾಣ ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಭಾಗ್ಯವೆಂದು ಹೇಳಿದರು.

ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ , 12 ವರ್ಷಗಳಿಗೊಮ್ಮೆ ದೇವರ ಬ್ರಹ್ಮಲಕಶ ಕಾರ್ಯಗಳು ನಡೆಯುತ್ತವೆಯಾದರೂ, ನಮಗೆ ಪುನರುತ್ಠಾನದ ಕೆಲಸ.

ಪದ್ಧತಿ ,ವಿಚಾರ,ಸಂಪ್ರದಾಯಗಳನ್ನು ವಿಮರ್ಶೆ ಮಾಡಿ, ಅದನ್ನ ಪುನಃ ಪುನರುತ್ಥಾನಕ್ಕೆ ಮಾಡುವ ಸಂಧರ್ಭ. ಇಂತಹ ಕಾರ್ಯವನ್ನು ಪದ್ಯಾಣ ದೇವಾಲಯದ ಸಮಿತಿ ಹಾಕಿಕೊಂಡಿದೆಯೆಂದು ಹೇಳಿದ ಅವರು , ನಡೆಯುವ ಕಾರ್ಯ, ಭವ್ಯ ಮೆರವಣಿಗೆ ಹಿರಿಮೆಯನ್ನು ಹೆಚ್ಚಿಸಲಿಯೆಂದು ಹಾರೈಸಿದರು.

ಹೊರಕಾಣಿಕೆ ಸಮಿತಿ ಸಂಚಾಲಕ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ , ನಮ್ಮ ಹಿರಿಯರು ಹೇಳಿಕೊಟ್ಟಂತೆಯೇ ಒಂದು ಹಿಂದೂ ಸಮಾಜದ ಜಾಗೃತಿ ಯಾವ ರೀತಿ ಆಗುತ್ತದೆಯೆಂದರೇ , ಸಾರ್ವಜನಿಕವಾಗಿ ಭಗವಂತನ ಸಾನಿಧ್ಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದಾಗ ಅದೊಂದು ದೊಡ್ಡ ಶಕ್ತಿಯಾಗಿ ,ಹಿಂದೂ ಸಮಾಜ ಸಂಪನ್ನಗೊಂಡು ,ಸಮಾಜಕ್ಕೆ ಪೂರಕವಾದ ಶಕ್ತಿ ನಿರ್ಮಾಣವಾಗುತ್ತದೆ. ನನ್ನ ಕೋರಿಕೆಯಿಷ್ಟೇ , ನಾವೆಲ್ಲಾ ನಮ್ಮಿಂದಾಗುವ ಸಹಾಯ ನೀಡಿ , ಕಾರ್ಯಕ್ರಮ ಯಶಸ್ವಿಗೊಳಿಸೋಣವೆಂದು ಹೇಳಿ, ವಂದಿಸಿದರು. ಶಾರದ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮುಡಿ ಅಕ್ಕಿಯನ್ನು ನೀಡಿದರು.

ಉಭಯ ಅಧ್ಯಕ್ಷರಾದ ಗೋಪಾಲಕೃಷ್ಣ ಹೇರಳೆ ಪ್ರಸ್ತಾವಿಕ ಮಾತನಾಡಿ , ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಇವರ ನೇತೃತ್ವದಲ್ಲಿ ಏ.1 ರಿಂದ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಮಾ.30 ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆ ಹೊರಡಲಿದ್ದು , 11 ಪವಿತ್ರ ನದಿಗಳ ನೀರನ್ನು ತೀರ್ಥ ರೂಪದಲ್ಲಿ ಸಂಗ್ರಹಿಸಿ , ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಆರತಿ ಬೆಳಗಿ, ಬಳಿಕ ಮೆರಣವಣಿಗೆ ಹೊರಡಲಿದೆಯೆಂದು ಮಾಹಿತಿ ನೀಡಿ ,ಎಲ್ಲರನ್ನೂ ಸ್ವಾಗತಿಸಿದರು. ಸ್ವಾಗತ ಸಮಿತಿ ತಂಡದ ಸಾಜ ರಾಧಾಕೃಷ್ಣ ಆಳ್ವ ಮತ್ತು ಡಾ. ಕೃಷ್ಣ ಪ್ರಸನ್ನ , ವಿದ್ಯಾ ಆರ್ ಗೌರಿ ,ಹೊರೆ ಕಾಣಿಕೆ ಸಮಿತಿಯ  ಅಭಿಜಿತ್ ಕೊಡಿಪ್ಪಾಡಿ ಮತ್ತು ರಾಜೇಶ್ ರೈ ಪರ್ಪುಂಜ ,ಸಂತೋಷ್ ಬೋನಂತಾಯ , ರಾಜೇಶ್ ಬನ್ನೂರು, ಅಜಿತ್ ರೈ ಹೊಸಮನೆ , ರಾಧಾಕೃಷ್ಣ ಬೋರ್ಕರ್ , ಶಿವಕುಮಾರ್ ಕಲ್ಲಿಮಾರ್ ಹಾಗೂ ಬ್ರಹ್ಮಲಕಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ಯಾಮ್ ಸುದರ್ಶನ್ ಹೊಸಮೂಲೆ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಆರ್.ಸಿ ನಾರಯಣ್ ಸಹಿತ ಹಲವು ಪ್ರಮುಖರು ಹಾಜರಿದ್ದರು.