Recent Posts

Sunday, April 26, 2026
ಸುದ್ದಿ

ಹಿಂದೂ ರಾಷ್ಟ್ರ ಜಾಗೃತಿ ಸಭೆ’ಗೆ ಎಸ್‌ಡಿಪಿಐ ಆಕ್ಷೇಪ; ಪ್ರತಿರೋಧದ ನಡುವೆಯೂ ಯಶಸ್ವಿಯಾಗಿ ಜರುಗಿದ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರಿನ ಕುಂಬ್ರ ರಾಮ ಭಜನಾ ಮಂದಿರದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಕಾರ್ಯಕ್ರಮವು ತೀವ್ರ ವಿರೋಧ ಮತ್ತು ಸವಾಲುಗಳ ನಡುವೆಯೂ ಯಶಸ್ವಿಯಾಗಿ ನೆರವೇರಿತು.

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯಕುಮಾರ್ ಮಾತನಾಡಿ ಹಿಂದೂ ರಾಷ್ಟ್ರ ಎಂದರೆ ಸತ್ವಗುಣಿ ಜನರು ಇರುವಂತಹ ರಾಷ್ಟ್ರವಾಗಿದೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಿ ಇಂತಹ ಧರ್ಮಜಾಗೃತಿ ಸಭೆಗಳಿಗೆ ವಿರೋಧ ಮಾಡುವುದು ಮತ್ತು ಅಡ್ಡಿಪಡಿಸುವುದು ಮತಾಂಧರ ನಿತ್ಯದ ಸಂಸ್ಕಾರವಾಗಿದೆ. ನಾವು ಮಾಡುತ್ತಿರುವುದು ಭಗವಾನ್ ಶ್ರೀ ಕೃಷ್ಣನ ಆಶೀರ್ವಾದದ ಧರ್ಮರಕ್ಷಣೆಯ ಕಾರ್ಯವಾಗಿದ್ದು ಈ ಧರ್ಮಕಾರ್ಯಕ್ಕೆ ಎಂದಿಗೂ ಅವನ ಆಶೀರ್ವಾದ ಮತ್ತು ರಕ್ಷಣೆ ಇದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ 2000ಕ್ಕೂ ಹೆಚ್ಚು ಹಿಂದೂ ರಾಷ್ಟ್ರ ಜಾಗೃತಿ ಸಭೆಗಳನ್ನು ಮಾಡುತ್ತಾ 20 ಲಕ್ಷಕ್ಕೂ ಹೆಚ್ಚು ಜನರಲ್ಲಿ ಧರ್ಮಜಾಗೃತಿ ಮೂಡಿಸಿದೆ. ಈ ಧರ್ಮ ಜಾಗೃತಿ ಕಾರ್ಯವನ್ನು ಕಾನೂನು ಚೌಕಟ್ಟಿನಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ಇಂತಹ ಸಭೆಗಳನ್ನು ನಿಲ್ಲಿಸುವುದು ಎಂದಿಗೂ ಅಸಾಧ್ಯದ ಮಾತಾಗಿದೆ ಎಂದರು.