ಆನ್ಲೈನ್ ಗೇಮ್ ಆಡ್ಬೇಡಿ ಎಂದು ಪೋಷಕರು ಬೈದಿದ್ದಕ್ಕೆ ಅಪಾರ್ಟ್ಮೆಂಟ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೂವರು ಸಹೋದರಿಯರು-ಕಹಳೆ ನ್ಯೂಸ್


ಗಾಜಿಯಾಬಾದ್: ಆನ್ಲೈನ್ ಗೇಮಿಂಗ್ ವ್ಯಸಕ್ಕೆ ಬಿದ್ದಿದ್ದ ಮೂವರು ಅಪ್ರಾಪ್ತ ಸಹೋದರಿಯ ಆತ್ಮಹತ್ಯೆ ಮಾಡಿಕೊಂಡ ಶಾಕಿಂಗ್ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಮೂವರು ಸಹೋದರಿಯರು ಸ್ನಾನ, ತಿನ್ನುವುದು, ಶಾಲೆಗೆ ಹೋಗುವುದು, ಮಲಗುವುದು ಮತ್ತು ಇತರ ದಿನನಿತ್ಯದ ಚಟುವಟಿಕೆಗಳನ್ನು ಒಳಗೊಂಡಂತೆ ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಅವರ ಕೈಗೆ ಮೊಬೈಲ್ ನೀಡಲಾಗಿತ್ತು. ಬಳಿಕ ಆನ್ಲೈನ್ ಆಟಗಳ ವ್ಯಸನಕ್ಕೆ ಬಿದ್ದಿದ್ದರು. ಅದರಲ್ಲೂ ಆನ್ಲೈನ್ ಟಾಸ್ಕ್ ಆಧಾರಿತ ‘ಕೊರಿಯನ್ ಲವ್ ಗೇಮ್’ ಹೆಚ್ಚು ಆಡುತ್ತಿದ್ದರು.