ಧರಿತ್ರಿ ಫೂಯೆಲ್ಸ್ ಇದರ ಆಶ್ರಯದಲ್ಲಿ ದಿ| ಬಿ. ರಾಮ ಭಟ್ ಹಸಂತಡ್ಕ ಇವರ ಸ್ಮರಣಾರ್ಥ ನಾಳೆ (ಜ.26) ಸಾರಡ್ಕ ಧರಿತ್ರಿ ಫೂಯೆಲ್ಸ್ ವಠಾರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ – ಕಹಳೆ ನ್ಯೂಸ್

ಧರಿತ್ರಿ ಫೂಯೆಲ್ಸ್ ಇದರ ಆಶ್ರಯದಲ್ಲಿ ಎ.ಜೆ. ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ದಿ| ಬಿ. ರಾಮ ಭಟ್ ಹಸಂತಡ್ಕ ಇವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರವು ಧರಿತ್ರಿ ಪ್ಯೂಯೆಲ್ಸ್ ವಠಾರ ಸಾರಡ್ಕದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ (ಜನರಲ್ ಚಿಕಿತ್ಸೆ),ಕಿವಿ, ಮೂಗು, ಗಂಟಲು ತಪಾಸಣೆ, ದಂತ ಚಿಕಿತ್ಸೆ, ಚರ್ಮರೋಗದ ತಪಾಸಣೆ, ಕಣ್ಣಿನ ತಪಾಸಣೆ, ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ, ಮಧುಮೇಹ, ರಕ್ತದ ಒತ್ತಡ ಪರೀಕ್ಷೆ, ಹೃದಯ ಸಂಬಂಧಿ ರೋಗ ತಪಾಸಣೆ (ಇ ಸಿ ಜಿ ) ಸೌಲಭ್ಯಗಳು ಲಭ್ಯವಿದ್ದು, ನಾಗರೀಕರು ಹಾಗೂ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶ್ರೀ ಸಮೃದ್ಧಿ ಅಸೋಸಿಯೇಟ್ಸ್ ಸಾರಡ್ಕ ಹಾಗೂ ಮುರಳೀಕೃಷ್ಣ ಹಸಂತಡ್ಕ ಮತ್ತು ಸಿಬ್ಬಂದಿ ವರ್ಗ, ಧರಿತ್ರಿ ಪ್ಯೂಯೆಲ್ಸ್, ಸಾರಡ್ಕ ಇವರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9742566947 | 7022436709









