Recent Posts

Sunday, June 7, 2026
ಜಿಲ್ಲೆಮೈಸೂರುಸುದ್ದಿ

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶಾಮ್ ಭಟ್ ಸೇರಿ ಮೂವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ -ಕಹಳೆ ನ್ಯೂಸ್

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ 106ನೇ ಘಟಿಕೋತ್ಸವ ಜ.5 ರಂದು ನಡಿಯಲಿದ್ದು.ರಾಜ್ಯದ ಮೂವರು ಗಣ್ಯರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್ ನೀಡಲಾಗುವುದು ಎಂದು ಕುಲಪತಿ ಪ್ರೋ| ಎನ್ ಕೆ ಲೋಕನಾಥ್ ತಿಳಿಸಿದರು.

ಜಾಹೀರಾತು

ವಿವಿಯ ಆಡಳಿತ ಕಚೇರಿ ಕ್ರಾಫರ್ಡ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ|ಟಿ. ಶಾಮ್ ಭಟ್ ಹಾಗೂ ಶಿಕ್ಷಣ ತಜ್ಞ ಮತ್ತು ಪರಿಸರವಾದಿ ಪಿ.ಜಯಚಂದ್ರ ರಾಜು ಅವರಿಗೆ ಗೌರವ ಡಾಕ್ಟರೆಟ್ ಪದವಿ ನೀಡಲಾಗುವುದು ಎಂದರು.ಬೆಳಗ್ಗೆ 11.30ಕ್ಕೆ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೆಟ್ ಪ್ರದಾನ ಮಾಡಲೊದ್ದಾರೆ ಎಂದು ತಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು