Sunday, June 14, 2026
ಸುದ್ದಿ

ಬೈಕ್‌ನಲ್ಲಿ ದನದ ಮಾಂಸ, ಆಯುಧ ಸಹಿತ ನಾಲ್ವರು ವಶಕ್ಕೆ – ಕಹಳೆ ನ್ಯೂಸ್

ಕುಮಟಾ: ಬೈಕ್‌ನಲ್ಲಿ ದನದ ಮಾಂಸ ಹಾಗೂ ಹರಿತ ಆಯುಧಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ತಾಲ್ಲೂಕಿನ ಸಂತೆಗುಳಿ ಗ್ರಾಮದ ಹಿಂಡಬೈಲ್ ಬಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು

ಬಂಧಿತರಿಂದ 35 ಕೆ.ಜಿ. ದನದ ಮಾಂಸ ಹಾಗೂ ಕತ್ತಿ, ಚಾಕು ಮುಂತಾದ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳನ್ನು ಸಂತೆಗುಳಿ ಗ್ರಾಮದ ಬಾಬು ಯಾನೆ ಆಶ್ರಫ್ ಜಕ್ರಿಯಾ ಖಾಜಿ, ಫಕೀರಸಾಬ್ ಜಮಾಲ್ ಸಾಬ್, ಗೌಸ್ ಅಬ್ದುಲ್ ರೆಹಮಾನ್ ಹಾಗೂ ಷರೀಫ್ ಸಾಬ್ ಎಂದು ಗುರುತಿಸಲಾಗಿದೆ.

ಹೊರಗಡೆ ಮೇಯಲು ಬಿಟ್ಟ ದನವನ್ನು ಭಾನುವಾರ ಹಿಡಿದು ವಧೆ ಮಾಡಿ ಆರೋಪಿ ಗೌಸ್ ಅಬ್ದುಲ್ ರೆಹಮಾನ್ ಅವರ ಮನೆಯ ಹತ್ತಿರ ಮಾಂಸ ಮಾಡಿ ಒಯ್ಯುತ್ತಿದ್ದ ಬಗ್ಗೆ ಶಿವರಾಜ ನಾಯ್ಕ ಎನ್ನುವವರು ದೂರಿದ್ದರು ಎಂದು ಪ್ರಕರಣ ದಾಖಲಿಸಿರುವ ಕುಮಟಾ ಪಿ.ಸ್.ಐ ಮಂಜುನಾಥ ಗೌಡರ್ ಮಾಹಿತಿ ನೀಡಿದ್ದಾರೆ.