
ನವದೆಹಲಿ: ಇಂದು ಮಧ್ಯರಾತ್ರಿಯಿಂದಲೇ ಅಡುಗೆಗೆ ಬಳಸುವ ಸಬ್ಸಿಡಿಸಹಿತ ಎಲ್ಪಿಜಿ ಸಿಲಿಂಡರ್ಗಳಿಗೆ ಹೊಸ ದರ ಜಾರಿಗೆ ಬರಲಿದ್ದು, 6.5 ರೂ. ಇಳಿಕೆ ಯಾಗಿದೆ. ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ. ಸಿಲಿಂಡರ್ ಬೆಲೆ 500.90 ರೂ. ಇರಲಿದೆ. ಈ ಮೊದಲು 507. ಹೊಸ ದರ ಜಾರಿಗೆ ಬರಲಿದ್ದು, ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ. ಸಿಲಿಂಡರ್ ಬೆಲೆ 500.90 ರೂ. ಇರಲಿದೆ.
ಈ ಮೊದಲು 507. ಹೊಸ ದರ ಜಾರಿಗೆ ಬರಲಿದ್ದು, ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ. ಸಿಲಿಂಡರ್ ಬೆಲೆ 500.90 ರೂ. ಇರಲಿದೆ. ಈ ಮೊದಲು 507. ಹೊಸ ದರ ಜಾರಿಗೆ ಬರಲಿದ್ದು, ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ. ಸಿಲಿಂಡರ್ ಬೆಲೆ 500.90 ರೂ. ಇರಲಿದೆ.
ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬರಲಿದ್ದು, ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ. ಸಿಲಿಂಡರ್ ಬೆಲೆ 500.90 ರೂ. ಇರಲಿದೆ. ಈ ಮೊದಲು 507.42 ರೂ. ಇದ್ದ ಈ ಸಿಲಿಂಡರ್ ಬೆಲೆ ಆರೂವರೆ ರೂ. ಕಡಿಮೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಓಸಿ) ಸ್ಪಷ್ಟಪಡಿಸಿದೆ.
ಜೂನ್ ತಿಂಗಳಿಂದ ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡುತ್ತಲೇ ಇತ್ತು. ಕಳೆದ 6 ತಿಂಗಳಲ್ಲಿ ಒಂದು ಸಿಲಿಂಡರ್ ಬೆಲೆ 14.13 ರೂ. ಏರಿಕೆಯಾಗಿದೆ. ಕೊನೆಯ ಬಾರಿ ಕಳೆದ ನವೆಂಬರ್ 1ರಂದು ಒಂದು ಎಲ್ಪಿಜಿ ಸಿಲಿಂಡರ್ಗೆ 2.94 ರೂ. ಏರಿಕೆ ಮಾಡಲಾಗಿತ್ತು.
ಸಬ್ಸಿಡಿರಹಿತ ಸಿಲಿಂಡರ್ ಅಥವಾ ಮಾರುಕಟ್ಟೆ ದರದ ಎಲ್ಪಿಜಿಗಳ ಬೆಲೆ 133 ರೂ. ಇಳಿಕೆಯಾಗಿದೆ. ಸಬ್ಸಿಡಿರಹಿತ 14.2 ಕೆ.ಜಿ. ಎಲ್ಪಿಜಿ ಸಿಲಿಂಡರ್ಗಳ ಬೆಲೆ ನವದೆಹಲಿಯಲ್ಲಿ 809.50 ರೂ. ಆಗಲಿದೆ. ದೇಶದ ಎಲ್ಲ ಎಲ್ಪಿಜಿ ಗ್ರಾಹಕರಿಗೂ ಹೊಸ ಮಾರುಕಟ್ಟೆ ದರದ ಆಧಾರದಲ್ಲೇ ಸಿಲಿಂಡರ್ಗಳು ಸಿಗಲಿವೆ.
ಒಂದು ವರ್ಷಕ್ಕೆ ಕೇಂದ್ರ ಸರ್ಕಾರ ಪ್ರತಿಮನೆಗೆ 14.2 ಕೆ.ಜಿಯ 12 ಸಿಲಿಂಡರ್ಗಳಿಗೆ ಸಬ್ಸಿಡಿ ನೀಡುತ್ತಿದೆ. ಸಬ್ಸಿಡಿಯ ಹಣವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ಇಂಧನದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾದಂತೆ ಸರ್ಕಾರವೂ ಹೆಚ್ಚಿನ ಸಬ್ಸಿಡಿ ನೀಡುತ್ತದೆ. ಅದೇನಾದರೂ ಇಳಿಕೆ ಆದರೆ, ಸಬ್ಸಿಡಿಯೂ ಕಡಿತಗೊಳ್ಳುತ್ತದೆ. ಹಾಗಾಗಿ, ಬ್ಯಾಂಕ್ ಖಾತೆಗೆ ಜಮಾ ಆಗುವ ಸಬ್ಸಿಡಿ ಮೊತ್ತ ತಿಂಗಳಿಂದ ತಿಂಗಳಿಗೆ ಹೆಚ್ಚು-ಕಡಿಮೆ ಆಗುತ್ತಿರುತ್ತದೆ.
ಡಿಸೆಂಬರ್ ತಿಂಗಳ ವೇಳೆಗೆ ಅಡುಗೆಗೆ ಬಳಸುವ ಸಬ್ಸಿಡಿಸಹಿತ ಎಲ್ಪಿಜಿ ಸಿಲಿಂಡರ್ಗಳಿಗೆ 308.60 ರೂ. ಸಬ್ಸಿಡಿಯನ್ನು ಸರ್ಕಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ.









