Friday, April 24, 2026
ಸುದ್ದಿ

ಭಾರತ Vs ಆಫ್ರಿಕಾ ಮಹಿಳಾ ವಿಶ್ವಕಪ್ ಫೈನಲ್‌ಗೆ ಮಳೆ ಅಡ್ಡಿ- ಕಹಳೆ ನ್ಯೂಸ್

ವಿಶ್ವಕಪ್‌ ಕ್ರಿಕೆಟಿನ ಭಾರತ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಪಂದ್ಯ ನಿಗದಿ ಪ್ರಕಾರ ಇಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದ ಇನ್ನೂ ಟಾಸ್‌ ಪ್ರಕ್ರಿಯೆ ನಡೆದಿಲ್ಲ.

ಭಾರತ ಮೂರು ಬಾರಿ ಫೈನಲ್‌ ಪ್ರವೇಶಿಸಿದ್ದರೂ ಇಲ್ಲಿಯವರೆಗೆ ಕಪ್‌ ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಹೀಗಾಗಿ ಯಾರೂ ಗೆದ್ದರೂ ಮೊದಲ ಚಾಂಪಿಯನ್‌ ಪಟ್ಟ ಅಲಂಕರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನ 3:30 ಆದರೂ ಸ್ಟೇಡಿಯಂ ಸುತ್ತಲೂ ಮಳೆಯಾಗುತ್ತಿದೆ. ಒಂದು ವೇಳೆ ಮಳೆ ನಿಂತರೆ ಕನಿಷ್ಠ 20 ಓವರ್‌ಗಳನ್ನು ಆಡಿಸಲಾಗುತ್ತದೆ. ಇಂದು ಆಟವನ್ನು ಆಡಿಸಲು ಸಾಧ್ಯವಾಗದೇ ಇದ್ದರೆ ನಾಳೆಗೆ ಪಂದ್ಯ ಮುಂದೂಡಲಾಗುತ್ತದೆ. ಮೀಸಲು ದಿನವೂ ಮಳೆಯಿಂದ ರದ್ದಾದರೆ ಎರಡೂ ತಂಡವನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.