Tuesday, June 16, 2026
ಸುದ್ದಿ

ಮಳೆಯ ನಡುವೆಯೂ ಅಮರನಾಥನ ದರ್ಶನಕ್ಕೆ ತೆರಳಿದ 1600 ಭಕ್ತರು -ಕಹಳೆ ನ್ಯೂಸ್

ಮ್ಮು-ಕಾಶ್ಮೀರ : ಭಾರೀ ಮಳೆಯ ನಡುವೆಯೂ ಇಂದು 1600 ಕ್ಕೂ ಹೆಚ್ಚು ಯಾತ್ರಿಕರು ಜಮ್ಮುವಿನಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹೆ ದೇವಾಲಯದ ಅವಳಿ ಮೂಲ ಶಿಬಿರಗಳಿಗೆ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಹೊರಟರು.

ಜಾಹೀರಾತು

ಜುಲೈ 3 ರಂದು ಕಣಿವೆಯಿಂದ ಪ್ರಾರಂಭವಾದ 3,880 ಮೀಟರ್‌ ಎತ್ತರದ ದೇವಾಲಯಕ್ಕೆ 38 ದಿನಗಳ ಯಾತ್ರೆಯಲ್ಲಿ 3.77 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಶಿವನ ಹಿಮಲಿಂಗದ ದರ್ಶನ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿಆರ್‌ಪಿಎಫ್‌‍ ಮತ್ತು ಪೊಲೀಸ್‌‍ ಸಿಬ್ಬಂದಿಯ ಬೆಂಗಾವಲಿನೊಂದಿಗೆ, 1,303 ಪುರುಷರು, 286 ಮಹಿಳೆಯರು, ನಾಲ್ವರು ಮಕ್ಕಳು ಮತ್ತು 42 ಸಾಧುಗಳು ಮತ್ತು ಸಾಧ್ವಿಗಳು ಸೇರಿದಂತೆ 1,635 ಯಾತ್ರಿಕರ 23 ನೇ ಬ್ಯಾಚ್‌‍, ಭಗವತಿ ನಗರ ಮೂಲ ಶಿಬಿರದಿಂದ 59 ವಾಹನಗಳಲ್ಲಿ ಬೆಳಗಿನ ಜಾವ 3:25 ರಿಂದ 4:00 ರ ನಡುವೆ ಕಾಶ್ಮೀರದ ಅವಳಿ ಮೂಲ ಶಿಬಿರಗಳಿಗೆ ತೆರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

17 ವಾಹನಗಳಲ್ಲಿ 374 ಯಾತ್ರಿಕರನ್ನು ಹೊತ್ತ ಮೊದಲ ಬೆಂಗಾವಲು ತಂಡವು ಗಂಡೇರ್‌ಬಲ್‌‍ ಜಿಲ್ಲೆಯ 14 ಕಿಮೀ ಬಾಲ್ಟಾಲ್‌ ಮಾರ್ಗಕ್ಕೆ ಹೊರಟಿತು, ನಂತರ 62 ವಾಹನಗಳಲ್ಲಿ 1,262 ಯಾತ್ರಿಕರ ಎರಡನೇ ಬೆಂಗಾವಲು ತಂಡವು ಅನಂತ್‌ನಾಗ್‌‍ ಜಿಲ್ಲೆಯ 48 ಕಿಮೀ ಸಾಂಪ್ರದಾಯಿಕ ಪಹಲ್ಗಾಮ್‌ ಮಾರ್ಗದ ಮೂಲಕ ಯಾತ್ರೆ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.

ಬಮ್‌ ಬಮ್‌ ಭೋಲೆ ಮತ್ತು ಹರ್‌ ಹರ್‌ ಮಹದೇವ್‌ ಎಂದು ಉತ್ಸಾಹದಿಂದ ಜಪಿಸುತ್ತಾ, ಯಾತ್ರಿಕರು ಗುಹಾ ದೇಗುಲಕ್ಕೆ ತೆರಳುವಾಗ ಭಾರೀ ಮಳೆಯನ್ನು ಎದುರಿಸಿದರು.ಇದರೊಂದಿಗೆ, ಜುಲೈ 2 ರಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದ ನಂತರ ಒಟ್ಟು 14,12,95 ಯಾತ್ರಿಕರು ಜಮ್ಮು ಮೂಲ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ.

ಕಳೆದ ವರ್ಷ, ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗವನ್ನು ಹೊಂದಿರುವ ಗುಹಾ ದೇಗುಲದಲ್ಲಿ 5.10 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪೂಜೆ ಸಲ್ಲಿಸಿದರು.ರಕ್ಷಾ ಬಂಧನ ಹಬ್ಬದೊಂದಿಗೆ ಆಗಸ್ಟ್‌ 9 ರಂದು ತೀರ್ಥಯಾತ್ರೆ ಕೊನೆಗೊಳ್ಳಲಿದೆ.