Recent Posts

Saturday, April 25, 2026
ಉಡುಪಿಜಿಲ್ಲೆಸುದ್ದಿ

ಧಾರಾಕಾರ ಮಳೆಗೆ ಮನೆ ಕುಸಿತ ಮನೆ ಮಂದಿ ಅಪಾಯದಿಂದ ಪಾರು : ಸ್ಥಳಕ್ಕೆ ಶಾಸಕ ಎ.ಕಿರಣ್ ಕೊಡ್ಗಿ ಬೇಟಿ -ಕಹಳೆ ನ್ಯೂಸ್

ಕೋಟ: ಕಳೆದ ರಾತ್ರಿಯಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆ ಮನೆ ಕುಸಿತವಾಗಿರುವ ಘಟನೆ ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರಿನ ಹರ್ತಟ್ಟು ನಿವಾಸಿ ಸೀತಾರಾಮ್ ದೇವಾಡಿಗ ಅವರ ಮನೆ ಮಳೆಗೆ ಸಂಪೂರ್ಣ ನೆಲಸಮವಾಗಿದ್ದು ಸ್ಥಳಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ಮನೆ ಕುಸಿತದಿಂದ ಮನೆಯಲ್ಲಿ ಇದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿದ್ದು ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ‌. ಮಳೆಯ ಅವಘಡದಿಂದ ಮನೆ ಕಳೆದುಕೊಂಡ ಸೀತಾರಾಮ ದೇವಾಡಿಗರವರ ಕುಟುಂಬ ಬೀದಿಗೆ ಬಂದಂತಾಗಿದ್ದು. ಶಾಸಕರು ಬ್ರಹ್ಮಾವರ ತಹಶೀಲ್ದಾರರಾದ ಶ್ರೀಕಾಂತ ಹೆಗ್ಡೆ ಇವರಿಗೆ ಕರೆ ಮಾಡಿ ಪ್ರಕೃತಿ ವಿಕೋಪ ದಡಿ ತುರ್ತು ಪರಿಹಾರ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೋಟ ಗ್ರಾಮಲೆಕ್ಕಾಧಿಕಾರಿ ಚೆಲುವರಾಜ್, ಗ್ರಾ.ಪಂ. ಸದಸ್ಯ ಅಜಿತ್ ದೇವಾಡಿಗ, ಉಪಾಧ್ಯಕ್ಷ
ಪಾಂಡು ಪೂಜಾರಿ, ಮತ್ತು ಪ್ರೇಮ ಹರೀಶ ದೇವಾಡಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು