Recent Posts

Sunday, April 26, 2026
ಸುದ್ದಿ

ರ‍್ಯಾಗಿಂಗ್‌ ಗೆ ಹೆದರಿ ವಿಡಿಯೋ ಮಾಡಿ ಟಾಪರ್ ವಿದ್ಯಾರ್ಥಿ ಆತ್ಮಹ*ತ್ಯೆ- ಕಹಳೆ ನ್ಯೂಸ್

ನೆಲಮಂಗಲ: ಪ್ರತಿಷ್ಠಿತ ಕಾಲೇಜಿನ ಇಂಜಿನಿಯರಿಂಗ್ ಆರ್ಕಿಟೆಕ್ಟ್ ವಿದ್ಯಾರ್ಥಿಯೋರ್ವ ತನ್ನ ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಕಾಲೇಜಿನ ವಾಟ್ಸಪ್ ಗ್ರೂಪ್ ಗೆ ಹಾಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲ ಸಮೀಪದ ನಂದರಾಮಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಹಾಸನ ಜಿಲ್ಲೆ ಹೊಳೆನರಸೀಪುರ ಮೂಲದ ಅರುಣ್ ಸಿ. (21) ಮೃತ ವಿದ್ಯಾರ್ಥಿಯಾಗಿದ್ದು,
ಯಲಹಂಕದ ಪ್ರತಿಷ್ಠಿತ ರೇವಾ ಕಾಲೇಜಿನ
ಇಂಜಿನಿಯರಿಂಗ್ ಆರ್ಕಿಟೆಕ್ಟ್ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು! ಮೃತ ವಿದ್ಯಾರ್ಥಿ ಅರುಣ್ ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದಾನೆ. ಆದ್ರೆ ಈಗ ಆತ್ಮಹತ್ಯೆ ಮಾಡಿಕೊಂಡು ಬಾರದ ಲೋಕಕ್ಕೆ ತೆರಳಿದ್ದಾನೆ. ಅಷ್ಟಕ್ಕೂ ವಿಡಿಯೋದಲ್ಲೇನಿದೆ ಅಂತ ನೀವೇ ನೋಡಿ…

ಎಲ್ಲಿಂದ ಹೇಳ್ಬೇಕೋ ಗೊತ್ತಿಲ್ಲ. ಒಂದು ವರ್ಷ ತುಂಬಾ ಹಾಳು ಮಾಡಿ ಬಿಡ್ತು ತಲೆ. ಎಲ್ರೂ ಅರ್ಥ ಮಾಡಿಕೊಳ್ಳಿ, ಎಲ್ಲಾ ಬೆನ್ನಿಂದೆ ಮಾತಾಡ್ತಾರೆ. ಮುಂದೆ ಕೇಳಿಸಿಕೊಳ್ತಾರೆ, ಹಿಂದೆ ಬೈಕೊಳ್ತಾರೆ.‌

ಒಂದು ವರ್ಷದಿಂದ ಎಲ್ಲರ ಬಳಿ ನನ್ನ ಸಮಸ್ಯೆ ಹೇಳಿಕೊಂಡಿದ್ದೇನೆ. ಏನಾದ್ರೂ ಮಾತಾಡಿ ವಿನ್ ಆಗ್ಬೇಕು ಅಂದ್ರೆ ಪರ್ಸನಲ್ ಮ್ಯಾಟರ್ ಬಂದು ಬಿಡುತ್ತೆ‌. ತುಂಬಾ ನಂಬಿದವರೇ ನೀನು ಆಡೋದೆಲ್ಲಾ ನಾಟಕ ಅಂತ ಕೆಟ್ಟದಾಗಿ ಅಸಭ್ಯವಾಗಿ ಮಾತಾಡೋದು, ಎಲ್ರು ಮುಂದೆ ಕ್ಲಾಸ್ ನಲ್ಲಿ ಆಡ್ಕೊಳ್ಳೋದು, ಐ ಲೆಫ್ಟ್ ಮಿ..ಸಾರಿ ಅಪ್ಪ..ಸಾರಿ ಅಮ್ಮ..ಚಿನ್ನುನಾ ಚೆನ್ನಾಗಿ ನೋಡ್ಕೊಳ್ಳಿ.

ನಾನು ತುಂಬಾ ಪ್ರಯತ್ನ ಪಟ್ಟೆ ಆಗ್ಲಿಲ್ಲ, ನಾನು ಯಾರ ಮೇಲೂ ಬ್ಲೇಮ್ ಮಾಡಲ್ಲ, ಒಂದು ವರ್ಷ ಕಷ್ಟಪಟ್ಟಿದ್ದೆ ಸಾಕು, ನಾನು ಹೋದ್ಮೇಲೆ ನಮ್ಮಪ್ಪನ ನೆಮ್ಮದಿನಾ ಹಾಳು ಮಾಡುವುದು ಇಷ್ಟವಿಲ್ಲ. ಒಂದು ಮಾತು… ನಿಮ್ಮಿಂದ ಒಳ್ಳೆಯದು ಮಾಡಕ್ಕಾಗಲ್ಲ ಅಂದ್ರೆ ಸುಮ್ಮನೆ ಇದ್ದುಬಿಡಿ. ಯಾರಿಗೂ ಕೆಟ್ಟದ್ದು ಮಾಡಬೇಡಿ ಎಂದು ಅಳುತ್ತಾ ಸೆಲ್ಫಿ ವಿಡಿಯೋ ಮಾಡಿ ಸಾಯುವ ಮುನ್ನ ಕಾಲೇಜ್ ಗ್ರೂಪ್ ಗೆ ಶೇರ್ ಮಾಡಿದ್ದ!

ಕೆಲವೇ ಕ್ಷಣದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡು ಯುವ ಚಿತ್ರಕಲೆಗಾರ ಹಾಗೂ ಆರ್ಕಿಟೆಕ್ಟ್ ಅರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸದ್ಯ ನೆಲಮಂಗಲ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅರುಣ್ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.