Sunday, April 26, 2026
ಸುದ್ದಿ

ಉಪ್ಪಿನಂಗಡಿ: ವಾರಸುದಾರರಿಗೆ ಪರ್ಸ್‌ ಹಸ್ತಾಂತರಿಸಿ ಪ್ರಾಮಾಣಿಕತೆ

ಪ್ಪಿನಂಗಡಿ: ಕೊಯಿಲದ ನಿವಾಸಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಸಿಕ್ಕಿದ ಹಣವಿದ್ದ ಪರ್ಸ್‌ ಅನ್ನು ಪೊಲೀಸರ ಮೂಲಕ ಅದರ ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಸಿದ್ದಿಕ್ ಅವರು ಕರಾಯ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದಾಗ ಕರಾಯ ಎಂಬಲ್ಲಿ ರಸ್ತೆ ಮಧ್ಯದಲ್ಲಿ ಪರ್ಸ್‌ ಸಿಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅದನ್ನು ತೆರೆದು ನೋಡಿದಾಗ ಹಣವಿದ್ದು, ಅದರಲ್ಲಿ ಇದ್ದ ವಿಳಾಸವನ್ನು ನೋಡಿ ಪರ್ಸ್‌ ಸಿಕ್ಕಿರುವುದಾಗಿ ತಿಳಿಸಿ ಪರ್ಸ್‌ ಅನ್ನು ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಸಿದ್ದು, ಪೊಲೀಸರು ಪರ್ಸ್‌ ಅನ್ನು ಅದರ ವಾರಸುದಾರ ಕೆಮ್ಮಾರ ನಿವಾಸಿ ಶ್ರೀಸ ಕುಮಾರ್ ಅವರಿಗೆ ನೀಡಿದ್ದಾರೆ.