ತುಮಕೂರಲ್ಲಿ ಟೈಯರ್ ಬ್ಲಾಸ್ಟ್ ಆಗಿ ಏಕಾಏಕಿ ಮನೆಗೆ ನುಗ್ಗಿದ ‘KSRTC’ ಬಸ್ : ಹಲವು ಪ್ರಯಾಣಿಕರಿಗೆ ಗಾಯ -ಕಹಳೆ ನ್ಯೂಸ್

ಹೌದು ಕೆಎಸ್‌ಆರ್ಟಿಸಿ ಬಸ್ ಒಂದು ನಿಯಂತ್ರಣ ಕಳೆದುಕೊಂಡು ಮನೆಗೆ ನುಗ್ಗಿದೆ. ಈ ವೇಳೆ ಮನೆಯ ಸದಸ್ಯರೆಲ್ಲರೂ ಶಾಕ್ ಆಗಿದ್ದಾರೆ. ಮಿಂಚಿನ ವೇಗದಲ್ಲಿ ಬಂದು ಕೆಎಸ್‌ಆರ್ಟಿಸಿ ಬಸ್ ಒಂದು ಮನೆಗೆ ನುಗ್ಗಿದೆ. ಚಲಿಸುತ್ತಿದ್ದ ಬಸ್ ಟೈಯರ್ ಬ್ಲಾಸ್ಟ್ ಆಗಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ.ಆದರೆ ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆಯ ಸಿದ್ದಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.












