ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಅಳಿಕೆ ವಲಯದಲ್ಲಿ ತಂಬಾಕು ವಿರೋಧಿ ದಿನಾಚರಣೆ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ ಅಳಿಕೆ ವಲಯದ ಮುಳಿಯ ಕಲ್ಪ ವೃಕ್ಷ ಜ್ಞಾನ ವಿಕಾಸಕೇಂದ್ರದಲ್ಲಿ ತಂಬಾಕು ವಿರೋಧಿ ದಿನಾಚರಣೆ ಹಾಗೂ ಯುಟ್ಯೂಬ್ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕೃಷ್ಣ ಕಾರಂತರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸಮುದಾಯ ಅರೋಗ್ಯ ಇಲಾಖೆಯ ರಂಜಿತಾ ಭಾಗವಹಿಸಿದ್ದರು.
ಈ ಸಂಧರ್ಭ ಅಳಿಕೆ ವಲಯಧ್ಯಕ್ಷರು ರಾಜೇಂದ್ರ ರೈ, ಮುಳಿಯ ಒಕ್ಕೂಟ ಅಧ್ಯಕ್ಷರರಾದ ಉದಯ , ಕೇಂದ್ರದ ಅಧ್ಯಕ್ಷರಾದ ಶಾಲಿನಿ ಶೆಟ್ಟಿ,ಹಾಗೂ ಸೇವಾಪ್ರತಿನಿಧಿಗಳುಕಾವ್ಯ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಸಮುದಾಯ ಅರೋಗ್ಯ ಇಲಾಖೆಯ ರಂಜಿತಾರವರು ಕೇಂದ್ರದ ಸದಸ್ಯರಿಗೆ ಉಚಿತ ಶುಗರ್ ಹಾಗೂ ಬಿಪಿ ಪರೀಕ್ಷೆ ಮಾಡಿದರು. ವಲಯ ಮೇಲ್ವಿಚಾರಕಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿ, ಜ್ಞಾನವಿಕಾಸ ಸಮನ್ವಯಧಿಕಾರಿ ದೀಪ ಸ್ವಾಗತಿಸಿ, ಮುಳಿಯ ಸೇವಾಪ್ರತಿನಿಧಿ ವಿನಯ ಧನ್ಯವಾದ ನೀಡಿದರು.









