Wednesday, April 29, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ -ಕಹಳೆ ನ್ಯೂಸ್

ಪುತ್ತೂರು : ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು ಪಡೆಯಲು ಪ್ರಾಚೀನ ಮಾರ್ಗವಾಗಿದೆ.
ಯೋಗ ಎಂಬ ಪದದ ಅರ್ಥ ಒಗ್ಗೂಡಿಸುವುದು. ಮನುಷ್ಯನು ತನ್ನ ಮನಸ್ಸು, ದೇಹ ಮತ್ತು ಆತ್ಮವನ್ನು ಒಟ್ಟಿಗೆ ತರಲು ಪ್ರಯತ್ನಿಸುವ ಪ್ರಕ್ರಿಯೆಯಾಗಿದೆ.ಈ ಏಕತೆಯು ಪ್ರಜ್ಞೆಯೊಂದಿಗೆ ದೇಹದ ಅಂತಿಮ ಒಕ್ಕೂಟವನ್ನು ಸೂಚಿಸುತ್ತದೆ ಮತ್ತು ಹೀಗಾಗಿ ನಿರ್ಣಾಯಕ ಶಾಂತಿಯನ್ನು ಪಡೆಯುತ್ತದೆ.

ಎಂದು ಪುತ್ತೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗಶಿಕ್ಷಕರಾದ ಶ್ರೀಮತಿ ಶರಾವತೀ ರವಿನಾರಾಯಣ ರವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಯೋಗದ ಪ್ರಾಮುಖ್ಯತೆಯನ್ನು ತಿಳಿಸುತ್ತಾ ಮಾತನಾಡಿದರು.

ವಾಸ್ತವವಾಗಿ ಯೋಗ ಎಂಬುದು ಶರೀರ,ಮನಸ್ಸು ಮತ್ತು ಆತ್ಮದ ಒಂದು ಕನ್ನಡಿಯಾಗಿ ವರ್ತಿಸುತ್ತದೆ. ಹಾಗೂ ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಮಧ್ಯವರ್ತಿಯಾಗಿ ಕೆಲಸ
ಮಾಡುತ್ತದೆ.ಜೀವನದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ, ಸಂತೋಷ, ಯಶಸ್ಸು ಎಲ್ಲವೂ ಕೈಗೂಡಬೇಕೆಂದರೆ ಯೋಗಾಭ್ಯಾಸವು ಅನಿವಾರ್ಯವಾಗಿರುತ್ತದೆ. ಎಂದು ಹೇಳಿದರು.

ಯೋಗವು ಮನಸ್ಸು ಮತ್ತು ದೇಹದ ಏಕತೆಯನ್ನು, ಚಿಂತನೆ ಮತ್ತು ಕ್ರಿಯೆಯನ್ನು, ಸಂಯಮ ಮತ್ತು ಪೂರೈಸುವಿಕೆಯನ್ನು, ಮನುಷ್ಯ ಮತ್ತು ಪ್ರಕೃತಿಯ
ನಡುವಿನ ಸಾಮರಸ್ಯವನ್ನು, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ಸಾಕಾರಗೊಳಿಸುತ್ತದೆ. ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರಿನ ಆದಾಯ ತೆರಿಗೆ ಕಛೇರಿಯಲ್ಲಿ ಟ್ಯಾಕ್ಸ್ ಅಸಿಸ್ಟೆಂಟ್ ಆಗಿರುವ ತೇಜಸ್ವಿ ಮಕಿನ್, ಕಾಲೇಜಿನ ರಸಾಯನ ಶಾಸ್ತç ವಿಭಾಗದ ಉಪನ್ಯಾಸಕರಾದ ಶ್ರೀಮತಿ ಶಶಿಕಲಾ ಇವರು
ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ವಿವಿಧ ಯೋಗಾಸನದ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಶ್ರೀಮತಿ ಶರಾವತೀ ರವಿನಾರಾಯಣ ಇವರು ತಿಳಿಸಿದರು.ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಅರ್ಚನಾ
ಸ್ವಾಗತಿಸಿ, ವಂದಿಸಿದರು.