Tuesday, September 8, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಬೋಳಿಯ ಶಾಲೆಗೆ ಶಾಲಾಭಿಮಾನಿಯಿಂದ ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಕಪಾಟು ದೇಣಿಗೆ – ಕಹಳೆ ನ್ಯೂಸ್

ಬೋಳಿಯ: ಸ ಉನ್ನತೀಕೃತ ಹಿ ಪ್ರಾ ಶಾಲೆ ಬೊಳಿಯ ಇಲ್ಲಿ ಜೂ 18 ರಂದು ಗ್ರಂಥಾಲಯಕ್ಕೆ ರೂ. 50,000/- ಮೌಲ್ಯದ ಪುಸ್ತಕ ಹಾಗೂ ಕಪಾಟು ಸಮರ್ಪಣಾ ಸಮಾರಂಭ ಜರುಗಿತು. ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ವಿಜಯಲಕ್ಷ್ಮೀ ಮೇಗಿನಮನೆ ಕೊಳವೂರು ಇವರು ತನ್ನ ಹುಟ್ಟೂರಿನ ಶಾಲೆಗೆ ಪುಸ್ತಕಗಳನ್ನು ಉಚಿತವಾಗಿ ಶಾಲೆಗೆ ನೀಡಿದರು. ಅವರಿಗೆ ಶಾಲಾವತಿಯಿಂದ ಗೌರವಾರ್ಪಣೆ ಮಾಡಲಾಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾಗಿರುವ ಶ್ರೀ ಗಂಗಾಧರ,ಮುತ್ತೂರು ಗ್ರಾ ಪಂ ಸದಸ್ಯರಾಗಿರುವ ಶ್ರೀಮತಿ ಪುಷ್ಪಾ ನಾಯ್ಕ್ ,ಪಲ್ಗುಣಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಸಂದೀಪ್ ಆಳ್ವ, ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಳದ ಟ್ರಸ್ಟಿ ಶ್ರೀ ಭವಾನಂದ ಶೆಟ್ಟಿ,ಶಿಕ್ಷಕರು, ವಿದ್ಯಾರ್ಥಿಗಳು,ಪೋಷಕರು ಕಾರ್ಯಕ್ರಮ ದಲ್ಲಿ ಉಪಸಿತರಿದ್ದರು.

ಮುಖ್ಯ ಶಿಕ್ಷಕಿ ಜಯಲಕ್ಷ್ಮೀಯವರು ಸ್ವಾಗತಿಸಿ,ಸ ಶಿ. ನಾಗೇಶ್ ನಾಯ್ಕ್ ವಂದಿಸಿದರು.ಸ ಶಿ.ಶಂಕರ್ ಶೆಟ್ಟಿ ಎಂ ವಿ.ಯವರು ಕಾರ್ಯಕ್ರಮವನ್ನು ನಿರೂಪಿಸಿದರು.