Recent Posts

Tuesday, May 5, 2026
ಸಂತಾಪಸುದ್ದಿ

ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗರು ದೈವಾಧೀನ- ಕಹಳೆ ನ್ಯೂಸ್

ತೆಂಕುತಿಟ್ಟಿನ ಮೇರು ಕಲಾವಿದ,ಕಟೀಲು ಮೇಳದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ತಿರುಗಾಟ ನಡೆಸಿದ ಕೋಡಿ ಕುಷ್ಟ ಗಾಣಿಗ(ಕುಂದಾಪುರದ ಕೃಷ್ಣ ಗಾಣಿಗ) (78)ಅಲ್ಪಕಾಲ ದ ಅಸೌಖ್ಯದಿಂದ ಗುರುವಾರ ಮಧ್ಯಾಹ್ನ ಸ್ವಗ್ರಹದಲ್ಲಿ ನಿಧನರಾದರು. ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನ ಮನ್ನಣೆ ಪಡೆದ ಇವರು ಶ್ರೀ ದೇವಿ ಮಹಾತ್ಮೆಯ ದೇವಿ ಪಾತ್ರ ಇಂದಿಗೂ ಯಕ್ಷಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ…

ಉಡುಪಿ ಕಲಾರಂಗ ಪ್ರಶಸ್ತಿ,ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಪ್ರಶಸ್ತಿ,ಡಾ.ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ, ಶ್ರೀ ಕ್ಷೇತ್ರ ಕೋಡಿ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಇವರಿಗೆ ಸಂದಿದೆ. ಮೃತರು ಪತ್ನಿ,ಮೂವರು ಪುತ್ರರು,ಓರ್ವ ಪುತ್ರಿ ಹಾಗೂ ಅಪಾರ ಯಕ್ಷ ಅಭಿಮಾನಿಗಳನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರ ಅಂತ್ಯ ಸಂಸ್ಕಾರ ದಿನಾಂಕ:13/06/2025ರ ಶುಕ್ರವಾರ ಬೆಳಿಗ್ಗೆ 8.30ರ ಹೊತ್ತಿಗೆ ನಡೆಯಲಿದೆ. ಎಂದು ಕುಟುಂಬದವರು ತಿಳಿಸಿದ್ದಾರೆ.