‘RCB ವಿಕ್ಟರಿ ಪರೇಡ್’ ಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡ್ಕೊಳಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ -ಕಹಳೆ ನ್ಯೂಸ್

ಹಾಗಾಗಿ ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಲು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಗ್ರಾಂಡ್ ಸ್ಟೆಪ್ ಮೇಲೆ ಈಗಾಗಲೇ ಸಿಬ್ಬಂದಿಗಳು ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. ಸರ್ಕಾರದಿಂದ ಆರ್‌ಸಿಬಿ ಆಟಗಾರರಿಗೆ ಗೌರವ ನೀಡಲು ಸಿದ್ಧತೆ ನಡೆಸಿದೆ ಅಭಿನಂದನೆ ಸಲ್ಲಿಕೆಗೆ ಭರದ ಸಿದ್ಧತೆ ನಡೆಸುತ್ತಿದೆ. ಸಂಜೆ 5 ಗಂಟೆಗೆ ಗೆ ವಿಕ್ಟರಿ ಪರೇಡ್ಡಿಯಲ್ಲಿದ್ದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿಕ್ಟರಿ ಪರೇಡನಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂದು ಡಿಜಿ ಮತ್ತು ಐಜಿಪಿ ಸಲೀಂ ಹಾಗೂ ಸಂಚಾರಿ ಜಂಟಿ ಆಯುಕ್ತ ಎಂ ಎನ್ ಅನುಚೆತ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು. ಸಂಭ್ರಮಾಚರಣೆಯ ವೇಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆಟಗಾರರು ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗಬಾರದು. ಪರೇಡ್ ವೇಳೆ ಸವಾರರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಮೊದಲೇ ಸವಾರರಿಗೆ ಬೇರೆ ಬೇರೆ ಮಾರ್ಗದ ವ್ಯವಸ್ಥೆ ಮಾಡಿ ವಿಧಾನಸೌಧ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಟ್ರಾಫಿಕ್ ನಿಭಾಯಿಸಿ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.











