Sunday, April 26, 2026
ದೆಹಲಿಸುದ್ದಿ

ಭೀಕರ ಕಾರು ಅಪಘಾತ : ಜನಪ್ರಿಯ ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೀಸನ್ 12ರ  ವಿಜೇತ ಗಾಯಕ ಪವನ್‌ದೀಪ್ ರಾಜನ್ ಗಂಭೀರ– ಕಹಳೆ ನ್ಯೂಸ್

ಲಕ್ನೋ: ಜನಪ್ರಿಯ ರಿಯಾಲಿಟಿ ಶೋನ ವಿಜೇತರಾಗಿ ಗುರುತಿಸಿಕೊಂಡಿರುವ ಗಾಯಕ ಪವನ್‌ ದೀಪ್ ರಾಜನ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂಡಿಯನ್ ಐಡಲ್ ಸೀಸನ್ 12 ವಿಜೇತ ಗಾಯಕ ಪವನ್‌ದೀಪ್ ರಾಜನ್ ಅವರು ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ.

ಮೇ.5ರ ಸೋಮವಾರ  ಮುಂಜಾನೆ 3ರ ಅಸುಪಾಸಿನಲ್ಲಿ ಉತ್ತರ ಪ್ರದೇಶದ ಅಮ್ರೋಹಾದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಪವನ್‌ದೀಪ್ ಅವರ ಎಂಜಿ ಹೆಕ್ಟರ್ ಕಾರು ನಿಲ್ಲಿಸಿದ್ದ ಐಷರ್ ಕ್ಯಾಂಟರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಪಘಾತವಾದ ಬಳಿಕ ಮೊದಲು ಗಾಯಾಳು ಪವನ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಾಯ ಗಂಭೀರವಾದ ಕಾರಣ ನೋಯ್ಡಾದ ಮತ್ತೊಂದು ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

ಅಪಘಾತದಲ್ಲಿ ಪವನ್‌ದೀಪ್ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪವನ್‌ದೀಪ್ ಉತ್ತರಾಖಂಡದ ಚಂಪಾವತ್‌ನಿಂದ ದೆಹಲಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.  ಪವನ್‌ದೀಪ್ ರಾಜನ್ ಇಂಡಿಯನ್ ಐಡಲ್ 12 ಗೆದ್ದು, 25 ಲಕ್ಷ ರೂ. ಚೆಕ್ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಬಹುಮಾನವಾಗಿ ಪಡೆದುಕೊಂಡಿದ್ದರು.