Monday, April 27, 2026
ಬೆಂಗಳೂರುಸುದ್ದಿ

ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್ ಹಾಗೂ ವಾರ್ತಾ ಇಲಾಖೆಯ ಆಯುಕ್ತರಿಗೆ KSDMF ನಿಂದ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಅಭಿನಂದನಾ ಸಮಾರಂಭ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಬರೀ TV, ಪತ್ರಿಕೆಗಳಿಗಷ್ಟೇ ಅಲ್ಲದೇ, ಇನ್ನು ಮುಂದೆ Digital Mediaಗೂ ಜಾಹೀರಾತು ನೀಡಬೇಕು ಎಂಬ ಸರ್ಕಾರ ಆದೇಶ ಜಾರಿಗಳಿಸಿದೆ. ಈ ಹಿನ್ನೆಲೆಯಲ್ಲಿ ಈ ನೀತಿ ಜಾರಿಯಾಗಲು ಕಾರಣರಾದ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮತ್ತು ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ಅಭಿನಂದಿಸಲು ಇದೇ ಮಂಗಳವಾರದಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ.

ಡಿಜಿಟಲ್ ಮೀಡಿಯಾಗಳಿಗೆ ಜಾಹಿರಾತು ಅನುಮತಿ KSDMF ಗೆ ಸಂತಸದ ಕ್ಷಣ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಸರಣಿ ಸಭೆಗಳ ಬಳಿಕ ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ಒಪ್ಪಿ ಆದೇಶ ಜಾರಿಗೊಳಿಸಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ. ಈ ಹಿನ್ನೆಲೆಯಲ್ಲಿ ಈ ನೀತಿ ಜಾರಿಯಾಗಲು ಕಾರಣರಾದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್ & ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನ ಅಭಿನಂಧಿಸಲು ತೀರ್ಮಾನಿಸಲಾಗಿದೆ. ಮಂಗಳವಾರ ( 29,04,2025 ) ಬೆಳಗ್ಗೆ 11 ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ KSDMF ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಇವರನ್ನ ಹೃತ್ಪೂರ್ವಕವಾಗಿ ಅಭಿನಂಧಿಸಲು ತೀರ್ಮಾನಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ನಮ್ಮ ಡಿಜಿಟಲ್ ಫೋರಂನ ಎಲ್ಲಾ ಸದಸ್ಯ ಸಂಸ್ಥೆಯ ಸಿಬ್ಬಂದಿಗಳು & ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ತಪ್ಪದೇ ಹಾಜರಾಗಿ ಅಭಿನಂಧನಾ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ. ಜಿಲ್ಲಾ ಮಟ್ಟದ ಡಿಜಿಟಲ್ ಮಾಧ್ಯಮ ಮಿತ್ರರೂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ

– ಕೆ.ಎಂ ಶಿವಕುಮಾರ್, KSDMF ಕಾರ್ಯದರ್ಶಿ ( ಕರ್ನಾಟಕ ಟಿವಿ ) 7204490507
– ವಸಂತ್ ಕುಮಾರ್, KSDMF ಉಪಾಧ್ಯಕ್ಷರು ( ಕನ್ನಡ ನ್ಯೂಸ್ ನೌ )- 9738123234
– ಮಾಲ್ತೇಶ್, KSDMF ಜಂಟಿ ಕಾರ್ಯದರ್ಶಿ 9480472030
– ರಜನಿ, KSDM ಜಂಟಿ ಕಾರ್ಯದರ್ಶಿ – 9606576789