Monday, April 27, 2026
ಜಿಲ್ಲೆದಕ್ಷಿಣ ಕನ್ನಡಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1001 ನ ವಾರದ ಸಭೆ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ-ಕಹಳೆ ನ್ಯೂಸ್

ಅಡ್ಕ ಸ್ಥಳ:  ಏ . 11.04.2025 ರಂದು ಅಡ್ಕ ಸ್ಥಳ ಶ್ರೀ ರಾಮ್ ಭಟ್ ರವರ ಮನೆಯ ಆವರಣದಲ್ಲಿ ಭಾಗ್ಯ ಶ್ರೀ ಸಂಘ ದ 1001ನ ವಾರದ ಸಭೆ ಹಾಗೂ ಸಂಘ ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಪುಷ್ಪಾಕರ ರೈ ಹಾಗೂ ಯೋಜನಾಧಿಕಾರಿ ರಮೇಶ್ ರವರು ವಿಧಿವತ್ತಾಗಿ ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಸಂಘ ದ ಸದಸ್ಯರಾದ ರೇವತಿಯವರು ತಮ್ಮ ಸಂಘ ದ ಸಾಧನೆಯನ್ನು ವಿವರಿಸುತ್ತಾ ಸದ್ರಿ ಸಂಘ 18.05 2006 ರಂದು ಆರಂಭಗೊಂಡು ಈ ತನಕ ಸಂಘ ದ ಉಳಿತಾಯ 179660 ಮಾಡಿ 6075000 ಪ್ರತಿನಿಧಿ ವಿನಿಯೋಗ ವಾಗಿದ್ದು,1550571 ರೂಪಾಯಿ ಸಾಲ ಚಾಲ್ತಿಯಲ್ಲಿದೆ ಎಂದು ವಿವರಿಸುತ್ತಾ ಸಂಘ ದ ಸಭೆ ವಾರ, ವಾರ ನಡೆಸಿದ್ದರಿಂದ ಸದಸ್ಯರ ಸಭಾ ಕಂಪನ ದೂರ ವಾಗಿದ್ದು ,ತುಂಬಾ ಪ್ರಯೋಜನವಾಗಿದ್ದು ಯೋಜನೆಯ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗವೈಸಿತಿರುವುದಾಗಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಯೋಜನೆಯ ಕೃಷಿಧಿಕಾರಿ ಚಿದಾನಂದ,ವಲಯ ಮೇಲಿಚಾರಕರದ ಜಗದೀಶ್ ಪೂಜಾರಿ,ಪದಾಧಿಕಾರಿಗಳಾದ ಮಹಾಲಿಂಗ ಗಾಣಿಗ,ಮುಖ್ಯ ಅತಿಥಿ ಗಳಾಗಿ ಶಿಕ್ಷಕ ರಾದ ಐತಪ್ಪ ನಾಯ್ಕ,ಶಿಕ್ಷಕರಾದ ವಿಠ್ಠಲ ಜಿ.ಪಂಚಾಯತ್ ಸದಸ್ಯರಾದ ಶ್ರೀಮತಿ ಜಯ ಶ್ರೀ ಕುಲಾಲ್ ಉಪಸ್ಥಿತರಿದ್ದು ,ಶ್ರೀಮತಿ ರೇವತಿ ವಂದಿಸಿ ,ಶ್ರೀಮತಿ ವಾಣಿ ಸ್ವಾಗತಿಸಿ ,ಶ್ರೀಮತಿ ದೇವಕಿ ಆರ್ ಭಟ್ ಕಾರ್ಯಕ್ರಮ ನಿರೂಪಿಸಿದರು