Monday, April 27, 2026
ಸುದ್ದಿ

ಮೊಬೈಲ್ ಸಂಭಾಷಣೆ: ಕಾರ್ಮಿಕ ಸಾವು – ಕಹಳೆ ನ್ಯೂಸ್

ಕಾಸರಗೋಡು: ಮೊಬೈಲ್ ನಲ್ಲಿ ಸಂಭಾಷಣೆ ಮಾತನಾಡುತ್ತಿದ್ದಾಗ ಆವರಣ ಇಲ್ಲದ ಬಾವಿಗೆ ಬಿದ್ದು ಕಾರ್ಮಿಕರೋರ್ವ ಮೃತಪಟ್ಟ ಘಟನೆ ರಾವಣೇಶ್ವರದಲ್ಲಿ ಗುರುವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ರಾವಣೇಶ್ವರ ಪಾರತ್ತೋಡ್ ನ ವಿ . ವಿ ಸುಜಿತ್ (38) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮನೆಗೆ ಬಂದಿದ್ದ ಸುಜಿತ್ ಆವರಣವಿಲ್ಲದ ಬಾವಿ ಬಳಿ ಕುಳಿತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸುಜಿತ್ ನಾಪತ್ತೆಯಾದುದರಿಂದ ಗಾಬರಿಗೊಂಡು ಮನೆಯವರು ಶೋಧ ನಡೆಸಿದಾಗ ಬಾವಿ ಬಳಿ ಚಪ್ಪಲಿ ಪತ್ತೆಯಾಗಿದ್ದು, ಬಾವಿಯನ್ನು ಗಮನಿಸಿದಾಗ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು , ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು. ಸುಜಿತ್ ಪೈಂಟಿಂಗ್ ಕಾರ್ಮಿಕರಾಗಿದ್ದರು.