Recent Posts

Saturday, April 25, 2026
ಸುದ್ದಿ

ಬಂದ ದಾರಿಗೆ ಸುಂಕವಿಲ್ಲದೇ ಮನೆ ದಾರಿ ಹಿಡಿದ ತೃಪ್ತಿ ದೇಸಾಯಿ – ಕಹಳೆ ನ್ಯೂಸ್

ಕೊಚ್ಚಿ[ನ.17] ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲೆಂದು ಸುಮಾರು 12 ಗಂಟೆಗಳ ಕಾಲ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನಿಂತರೂ ದೇವಾಲಯಕ್ಕೆ ಹೋಗಲು ಸಾಧ್ಯವಾಗದೆ ತೃಪ್ತಿ ದೇಸಾಯಿ ಹಿಂದೆ ತಿರುಗಿದ್ದಾರೆ.

ಆರು ಮಂದಿ ಮಹಿಳೆಯರೊಂದಿಗೆ ಬೆಳಗ್ಗೆ ಮುಂಜಾನೆಯೇ ಕೊಚ್ಚಿ ವಿಮಾನ ನಿಲ್ದಾಣಕ್ಕೆ ದೇಸಾಯಿ ಆಗಮಿಸದರಾದರೂ, ಭಾರಿ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರಿಂದ ವಿಮಾನ ನಿಲ್ದಾಣದಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಪೊಲೀಸರು ಮಾತನಾಡಿ ಪುಣೆಗೆ ವಾಪಾಸ್ ಹೋಗುವಂತೆ ಮನವಿ ಮಾಡಿಕೊಂಡರು ಎಂದು ತೃಪ್ತಿ ದೇಸಾಯಿ ವಿಮಾನ ನಿಲ್ದಾಣದಲ್ಲೇ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತೃಪ್ತಿ ದೇಸಾಯಿಗೆ ಈ ಮೊದಲೇ ಕೇರಳಕ್ಕೆ ಆಗಮಿಸಿದರೆ ಕೆಟ್ಟ ಪರಿಣಾಮ ಎದುರಿಸಲು ಸಿದ್ಧರಾಗಿ ಎಂಬ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ತಾನು ಹಿಂತಿರುಗುವವರೆಗೂ ತನಗೆ ಭದ್ರತೆ ನೀಡಬೇಕೆಂದು ತೃಪ್ತಿ ದೇಸಾಯಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜ‌ಯನ್‌ರಿಗೆ ಪತ್ರವೊಂದರ ಮೂಲಕ ಮನವಿ  ಸಹ ಮಾಡಿಕೊಂಡಿದ್ದರು.