Recent Posts

Saturday, April 25, 2026
ಅಂತಾರಾಷ್ಟ್ರೀಯದೆಹಲಿಸುದ್ದಿಹೆಚ್ಚಿನ ಸುದ್ದಿ

ರಾಮಮಂದಿರ ಪ್ರತಿಷ್ಟಾಪನೆಗೆ 1 ವರ್ಷ; ವಾರ್ಷಿಕೋತ್ಸವಕ್ಕೆ ಪ್ರಧಾನಿ ಮೋದಿ ಶುಭಾಶಯ-ಕಹಳೆ ನ್ಯೂಸ್

ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರಿಗೆ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಮಮಂದಿರ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮದ ದೊಡ್ಡ ಪರಂಪರೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪವಿತ್ರ ದೇವಾಲಯ ಶತಮಾನಗಳ ತ್ಯಾಗ, ಹೋರಾಟ ಮತ್ತು ಭಕ್ತಿಯಿಂದ ನಿರ್ಮಿತವಾಗಿದೆ ಎಂದು ಹೇಳಿದ್ದಾರೆ.

ಇಂದಿನಿAದ (ಶನಿವಾರ) ಆರಂಭವಾಗಿರುವ ವಾರ್ಷಿಕೋತ್ಸವ ಕಾರ್ಯಕ್ರಮ ಸೋಮವಾರದವರೆಗೂ ನಡೆಯಲಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಮಲಲ್ಲಾ ಮೂರ್ತಿಗೆ ಅಭಿಷೇಕ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಹಾ ಆರತಿ ಬೆಳಗಿ ದೇವರಿಗೆ 56 ತಿನಿಸುಗಳನ್ನು ಅರ್ಪಿಸಿದರು.