Saturday, April 25, 2026
ದಕ್ಷಿಣ ಕನ್ನಡಪುತ್ತೂರುಶುಭಾಶಯಸುದ್ದಿ

ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ರೈ ಕೇಪು ,ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ-ಕಹಳೆ ನ್ಯೂಸ್

ಪುತ್ತೂರು: ಡಿ.26 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ವಿಟ್ಲ ಕೇಪು ಮೂಲದ ರಾಜೇಶ್ ರೈ ಕಲ್ಲಂಗಳ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು.

ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಸಾದ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದಿಂದ ಗೌರವಾರ್ಥವಾಗಿ ಶಲ್ಯ ತೊಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ನ್ಯಾಯಾಧೀಶ ರಾಜೇಶ್ ರೈ ಅವರ ಪತ್ನಿ ರೇಷ್ಮಾ ರಾಜೇಶ್ ರೈ ಜೊತೆಗಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪಿ,ವಿ, ಮಹಾಬಲ ರೈ ವಳತ್ತಡ್ಕ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ನ್ಯಾಯಾಲಯದ ಪ್ರೊಟೊಕಾಲ್ ಪಾಂಡುರಂಗ ಬೇಲೀಫ್ ಉಪಸ್ಥಿತರಿದ್ದರು.