ನಮಸ್ಕಾರ ದೇವ್ರೂ…!!! ಡಾ. ಬ್ರೋ ಜೊತೆ ಕೆಲಸ ಮಾಡೋ ಆಸೆ ಇದೆಯಾ..? ; ಇಲ್ಲಿದೆ ಅವಕಾಶ – ಕಹಳೆ ನ್ಯೂಸ್

ಡಾ. ಬ್ರೊ ಒಡೆತನದ ಕಂಪನಿ ಗೋ ಪ್ರವಾಸದಲ್ಲಿ ಕೆಲಸ ಖಾಲಿ ಇದೆ. ಗಗನ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ.
ಗಗನ್ ನೀಡಿರುವ ಮಾಹಿತಿ ಪ್ರಕಾರ, ಗೋ ಪ್ರವಾಸ ಕಂಪನಿಯಲ್ಲಿ, ಇಂಟರ್ನ್ಯಾಷನಲ್ ಆಪರೇಷನ್ ಎಕ್ಸಿಕ್ಯೂಟಿವ್, ಹಾಲಿಡೇ ಪ್ಯಾಕೇಜ್ ನಲ್ಲಿ ಕೆಲಸ ಮಾಡಿ ಅನುಭವ ಇರುವವರು ಕೆಲಸಕ್ಕೆ ಬೇಕಾಗಿದ್ದಾರೆ. ಇದಲ್ಲದೆ ದೇಶೀಯ ಆಪರೇಷನ್ ಎಕ್ಸಿಕ್ಯೂಟಿವ್, ಹಾಲಿಡೇ ಪ್ಯಾಕೇಜ್ ನಲ್ಲಿ ಕೆಲಸ ಮಾಡಿ ಅನುಭವ ಇರುವವರ ಅವಶ್ಯಕತೆ ಇದೆ, ಜೊತೆಗೆ, ಏಷ್ಯಾದ ದೇಶಗಳಿಗೆ ವೀಸಾ ನೀಡುವ ತಜ್ಞರ ಅಗತ್ಯವಿದೆ. ಟಿಕೆಟಿಂಗ್ ಹುದ್ದೆ ಕೂಡ ಖಾಲಿ ಇದೆ.
ಒಟ್ಟೂ ನಾಲ್ಕು ಹುದ್ದೆ ಖಾಲಿ ಇದ್ದು, ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ತಿಳಿದಿರಬೇಕು. ಪಿಯುಸಿ ಪಾಸ್ ಆದವರು, ಪದವಿದರರು,ಟೂರಿಸ್ಟ್ ಕೋರ್ಸ್ ಮಾಡಿದವರಿಗೆ ಮೊದಲ ಆದ್ಯತೆ. ಗಗನ್ ಸಂಬಳ ಎಷ್ಟು ಕೊಡ್ತಾರೆ ಅನ್ನೋದನ್ನು ತಮ್ಮ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿಲ್ಲ. ನಿಮಗೆ ಈ ಕೆಲಸದಲ್ಲಿ ಅನುಭವವಿದ್ರೆ ಈಗ್ಲೇ ಅಪ್ಲೈ ಮಾಡಿ. ನೀವು ಅರ್ಜಿ ಸಲ್ಲಿಸಬಹುದು.











