Recent Posts

Saturday, April 25, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಜ.21ರಂದು (ನಾಳೆ) ಬಿಸಿರೋಡಿನಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನ ಲೋಕರ್ಪಣೆ – ಕಹಳೆ ನ್ಯೂಸ್

ಬಂಟ್ವಾಳ: ಬಿಸಿರೋಡಿನಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನ ಜ.21 ರಂದು ಆದಿತ್ಯವಾರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ ಎಂದು ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ತಿಳಿಸಿದರು.

ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದೊಂದಿಗೆ ಅಂಬೇಡ್ಕರ್ ಭವನ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬಿಸಿರೋಡಿನ ಕೈಕಂಬ ಪೆÇಳಲಿ ದ್ವಾರದಿಂದ ಭವ್ಯವಾದ ಮೆರವಣಿಗೆ ಜಾಥ ನಡೆಯಲಿದ್ದು, ಬೆಳಿಗ್ಗೆ ಉದ್ಘಾಟನೆಗೂ ಮುಂಚಿತವಾಗಿ 10 ಗಂಟೆಯಿಂದ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ತಿಳಿಸುವ ವಿವಿಧ ಕಾರ್ಯಾಗಾರಗಳು ನಡೆಯಲಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಸರಕಾರಿ ಇಲಾಖಾ ಕಾರ್ಯಕ್ರಮವಾಗಿದ್ದು, ಇದರ ಕುರಿತಾದ ಸುದ್ದಿಗೋಷ್ಠಿ ನಡೆಸುವುದು ಸರಿಯಾದ ಕ್ರಮವಲ್ಲ ಈ ಬಗ್ಗೆ ಕ್ಷಮೆಯಿರಲಿ, ಆದರೆ ತುರ್ತಾಗಿ ಮಂತ್ರಿಗಳ ಸಮಯವನ್ನು ಹೊಂದಿಸಿಕೊಂಡು ಅಧಿಕಾರಿಗಳು ನಿಗದಿಪಡಿಸಿದ ದಿನದಂದು ಉದ್ಘಾಟನೆ ನಡೆಯುವ ಕಾರ್ಯಕ್ರಮಕ್ಕೆ ಸಮಾಜದ ಪ್ರತಿಯೊಬ್ಬರನ್ನು ಮುಖತಃ ಬೇಟಿಯಾಗಿ ಅಹ್ವಾನ ನೀಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸತೀಶ್ ಅರಳ ಸಂತೋಷ ಭಂಡಾರಿಬೆಟ್ಟು, ಸರೋಜಿನಿ, ನಾಗರಾಜ್ ಎಸ್ ಲಾಯಿಲ, ಜನಾರ್ದನ ಚೆಂಡ್ತಿಮಾರ್, ಕೇಶವ ನಾಯ್ಕ, ರಾಜೀವ ಕಕ್ಯಪದವು ಉಪಸ್ಥಿತರಿದ್ದರು.