Recent Posts

Saturday, April 25, 2026
ರಾಜ್ಯಸುದ್ದಿಹಾಸನ

ಸನಾತನ ಧರ್ಮ ನಾಶವಾಗಲಿ ಎಂದು ಬಯಸಿದವರು ರಾಜಕೀಯವಾಗಿ ನಾಶವಾದರು : ಕಲ್ಲಡ್ಕ ಪ್ರಭಾಕರ್ ಭಟ್ – ಕಹಳೆ ನ್ಯೂಸ್

ಹಾಸನ : ಸಮಸ್ತ ಹಿಂದೂಗಳೆಲ್ಲರೂ ಪೂಜಿಸುವ ಶ್ರೀರಾಮನ ಕುರಿತು ಕೆಲವರು ಪ್ರಶ್ನೆ ಮಾಡುವವರಿದ್ದಾರೆ. ಇನ್ನು ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು ಎಂದು ಶ್ರೀರಾಮ ವಿದ್ಯಾ ಕೇಂದ್ರದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು.

ರಾಮಮಂದಿರ ನಿರ್ಮಾಣ ಮಾಡಲು ಆ ವೇಳೆ ರಾಜೀವ್ ಗಾಂಧಿ ವಿರೋಧ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

೧೯೮೯ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದವು. ಎಲ್ಲಿಯೂ ರಾಮ ಭಕ್ತರು ರಾಮಮಂದಿರ ತಲುಪದಂತೆ ಅಂದಿನ ಸರ್ಕಾರಗಳು ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜನೆ ಮಾಡಿದರು ಹಾಗೂ ಮುಲಾಯಂ ಸಿಂಗ್ ಯಾದವ್‌ ಗುಂಡು ಹಾರಿಸಲು ಸೂಚನೆ ನೀಡಿದರು ಎಂದರು.

ಈ ದೇಶದಲ್ಲಿ ರಾಮಮಂದಿರ ನಿರ್ಮಾಣವಾದರೆ ರಾಮರಾಜ್ಯ ನಿರ್ಮಾಣವಾಗುತ್ತದೆ. ರಾಮರಾಜ್ಯ ನಿರ್ಮಾಣವಾದರೆ ಈ ದೇಶದಲ್ಲಿ ದಿನನಿತ್ಯ ನಡೆಯುವ ಜಗಳ, ಮತಾಂತರ ಭಯೋತ್ಪಾದನೆ ನಿಂತುಹೋಗಲಿದೆ. ಹಿಂದೂಗಳೆಲ್ಲ ಒಂದಾಗಿದ್ದೇವೆ. ಆ ಕಾರಣಗಳಿಗಾಗಿ ರಾಮಮಂದಿರ ನಿರ್ಮಾಣವಾಯಿತು.

ಮತ ಗಳಿಕೆಗೆ ಕಾರಣ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕೂಡ ನಾನು ಹಿಂದೂ ಅನ್ನುತ್ತಾರೆ. ಆದರೆ ಆರ್ ಎಸ್.ಎಸ್ ನವರನ್ನು ಹಿಂದೂಗಳಲ್ಲ ಎನ್ನುತ್ತಾರೆ. ನಮ್ಮಲ್ಲಿ ಆರ್.ಎಸ್.ಎಸ್. ಹಿಂದೂ ಸಾಮಾನ್ಯ ಹಿಂದೂ ಎಂಬುದಿಲ್ಲ ಎಂದು ಟೀಕಾಕಾರರಿಗೆ ಟಾಂಗ್ ನೀಡಿದರು.