Monday, June 15, 2026
ಸುದ್ದಿ

ಶಿರಾಡಿ ಘಾಟ್ ನಲ್ಲಿ ಅಪಘಾತ : ಮಿನಿಲಾರಿಗೆ ಡಿಕ್ಕಿಯಾಗಿ ಪರಾರಿಯಾದ ಘನ ವಾಹನ – ಕಹಳೆ ನ್ಯೂಸ್

ನೆಲ್ಯಾಡಿ: ಶಿರಾಡಿ ಘಾಟ್ ನ ಗುಂಡ್ಯ ಗಡಿ ದೇವಸ್ಥಾನಕ್ಕಿಂತ ಮೇಲೆ ಕೆಂಪು ಹೊಳೆ ಸಮೀಪ ಮಿನಿ ಲಾರಿಯೊಂದಕ್ಕೆ ಯಾವುದೋ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು ಈ ಅಪಘಾತದಲ್ಲಿ ಮಿನಿ ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ  ನಡೆದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟವರು ಹಾಸನ ನಿವಾಸಿಗಳು ಎಂದು ತಿಳಿದುಬಂದಿದೆ. ಮಿನಿ ಲಾರಿ ಹಾಸನದಿಂದ ಮಂಗಳೂರಿಗೆ ಬರುತ್ತಿತ್ತು. ಶಿರಾಡಿ ಘಾಟ್ ನ ಕೆಂಪು ಹೊಳೆ ಸಮೀಪ ಮಿನಿ ಲಾರಿಗೆ ಯಾವುದೋ ಘನ ವಾಹನ ಡಿಕ್ಕಿಯಾಗಿ ಪರಾರಿಯಾಗಿದೆ. ಘಟನೆಯಲ್ಲಿ ಮಿನಿ ಲಾರಿ ಸಂಪೂರ್ಣ ಜಖಂಗೊಂಡಿದೆ. ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಕಲೇಶಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.