Tuesday, April 28, 2026

archivekahale news

ಸುದ್ದಿ

ಜಿ.ಎಲ್. ಆಚಾರ್ಯ ನಿಧನ ಹಿನ್ನಲೆ – ವಿವೇಕಾನಂದ ಕಾಲೇಜಿಗೆ ರಜೆ ; ಪುತ್ತೂರಿನಲ್ಲಿ ಹಲವಾರು ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಸಂತಾಪ ಸೂಚನೆ – ಕಹಳೆ ನ್ಯೂಸ್

ಪುತ್ತೂರು : ಸ್ವರ್ಣ ಉದ್ಯಮಿ ಜಿ.ಎಲ್. ಆಚಾರ್ಯ ನಿಧನ ಹಿನ್ನಲೆಯಲ್ಲಿ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾಸಂಸ್ಥೆ ಮಕ್ಕಳಿಗೆ ರಜೆ ಘೋಷಿದೆ. ಇನ್ನುಳಿದಂತೆ ‌ನಗರದ ಹಲವಾರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಸಂತಾಪ ಸೂಚಿಸಿದ್ದಾರೆ....
ಸುದ್ದಿ

Breaking News : ಪುತ್ತೂರಿನ ಬಂಗಾರದ ಮನುಷ್ಯ ಜಿ.ಎಲ್ ಆಚಾರ್ಯ ಇನ್ನು ನೆನಪು ಮಾತ್ರ – ಕಹಳೆ ನ್ಯೂಸ್

ಜುಲೈ 13: ಪುತ್ತೂರಿನ ,ವ್ಯವಹಾರ ಲೋಕದ ದಿಗ್ಗಜ್ಜ ಎಂದೇ ಗುರುತಿಸಿಕೊಂಡಿದ್ದ , ಸ್ವರ್ಣಧ್ಯೋಮದಲ್ಲಿ ಹೊಸ ಶಕೆಯನ್ನು ಬರೆದ, ವಿವೇಕಾನಂದ ವಿಧ್ಯಾವರ್ಧಕ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಗುಂಡಿ ಬೈಲು ಲಕ್ಷ್ಮೀನಾರಾಯಣ ಆಚಾರ್ಯ ಇಂದು ಬೆಳಿಗ್ಗೆ ಅವರು ನಿಧನರಾಗಿದ್ದಾರೆ. ಅವರು ಜನಮಾನಸದಲ್ಲಿ ಜಿ.ಎಲ್ ಆಚಾರ್ಯ ಎಂದೇ ಪರಿಚಿತರಾಗಿದ್ದರು.  ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತಿದ್ದರು.ಮೃತರು  ಪತ್ನಿ, ಪುತ್ರ ಮೊಮ್ಮಕ್ಕಳು ಅಪಾರ ಬಂಧು ಮಿತ್ರರನ್ನು ನ್ನು ಅಗಲಿದ್ದಾರೆ 1957ರಲ್ಲಿ...
ಸುದ್ದಿ

ಶ್ರೀರಾಮಚಂದ್ರಾಪುರ ಮಠದ ಗೋ ಸೇವಾ ಕಾರ್ಯಕ್ಕೆ 40 ಎಕರೆ ಜಾಗ ನೀಡಿದ ದಕ್ಷಿಣ ಕನ್ನಡದ ನೂಜಿಬೈಲು ವೆಂಕಟರಾಮಯ್ಯ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳು ಸಾದಾ ಗೋ ಸಂರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಸಧ್ಯ ಗೋ ಸರ್ಗ ಎಂಬ ಅಪೂರ್ವ ಕಲ್ಪನೆ ಗೋಶಾಲೆಯನ್ನು ನಿರ್ಮಿಸುತ್ತಿದ್ದಾರೆ. ಈ ಕಾರ್ಯಕ್ಕೆ ಬೆಂಬಲವಾಗಿ ನೂಜಿಬೈಲು ವೆಂಕಟರಾಮಯ್ಯನವರು ದ.ಕ ಮತ್ತು ಕೊಡಗಿನ ಗಡಿಯಲ್ಲಿರುವ, 40 ಎಕರೆ ವಿಸ್ತೀರ್ಣದ, ತನ್ನ ಸ್ವರ್ಗಸದೃಶವಾದ ಭೂಮಿಯೆಲ್ಲವನ್ನೂ ಗೋಸೇವೆಗಾಗಿ ಶ್ರೀಮಠಕ್ಕೆ ಸಮರ್ಪಿಸಿದ್ದಾರೆ....
ಸುದ್ದಿ

ನಾಯಿ ಕೊಡೆಗಳಂತೆ ಮಂಗಳೂರಿನಲ್ಲಿ ತಲೆ ಎತ್ತಿದ ಮಾಂಸದ ಅಡ್ಡೆಗಳು ; ವೇಶ್ಯಾವಾಟಿಕೆ ಅಡ್ಡೆಗೆ ಸಿಸಿಬಿ ದಾಳಿ ಇಬ್ಬರ ಬಂಧನ – ಕಹಳೆ ನ್ಯೂಸ್

ಮಂಗಳೂರು, ಜು 12: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಪಿಂಪ್ ಗಳನ್ನು ಬಂಧಿಸಿದ್ದಾರೆ. ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಸಜಿತ್ ಶೇಖರ್ ಹಾಗೂ ಮಹಿಳಾ ಪಿಂಪ್ ಒಬ್ಬಾಕೆಯನ್ನು ವಶಕ್ಕೆ ಪಡೆದುಕೊಂಡು ಅವರ ಬಳಿ ಇದ್ದ 5 ಮೊಬೈಲ್ ಫೋನ್ ಗಳನ್ನು ಹಾಗೂ ನಗದು 15,240 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಜಿತ್...
ರಾಜಕೀಯ

ಇಂದು ಬಿಎಸ್‍ವೈಗಾಗಿ ಊಟಕ್ಕೆ ಕುಳಿತಿದ್ದ ಕುರ್ಚಿ ಬಿಟ್ಟು ಕೊಟ್ರು ಎಚ್‍ಡಿಕೆ ಇನ್ನು ನಾಳೆ ಸಿಎಂ ಕುರ್ಚಿನೂ..? – ಕಹಳೆ ನ್ಯೂಸ್

ಬೆಂಗಳೂರು: ಸದನದಲ್ಲಿ ಭಾರೀ ಚಕಮುಕಿ ನಡೆಸುವ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮುಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ಮರೆತು ಔತಣಕೂಟದಲ್ಲಿ ಭಾಗವಹಸಿ, ಸಹಕಾರದಿಂದ ನಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ಸಿಎಂ ಕುಮಾರಸ್ವಾಮಿ ಅವರು ಭೋಜನ ಕೂಟ ಆಯೋಜಿಸಿದ್ದರು. ಔತಣಕೂಟಕ್ಕೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಆಗಮಿಸುತ್ತಿದಂತೆ ಅವರನ್ನು ಕುಮಾರಸ್ವಾಮಿ ಕೈ ಕುಲುಕಿ ಆಹ್ವಾನಿಸಿ, ತಾವು ಕುಳಿತಿದ್ದ ಕುರ್ಚಿಯನ್ನು ಬಿಟ್ಟುಕೊಟ್ಟರು. ಕುಮಾರಸ್ವಾಮಿ ಅವರ...
ಸುದ್ದಿ

ಪುತ್ತೂರಿನ ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಲೆಂಜಿ ಎಂಬಲ್ಲಿ ರಾತ್ರೋರಾತ್ರಿ ರಸ್ತೆಯಲ್ಲೇ ಮೂಟೆಗಟ್ಟಲೆ ಕೋಳಿ ತ್ಯಾಜ್ಯ ಎಸೆದ ದುಷ್ಕರ್ಮಿಗಳು – ಕಹಳೆ ನ್ಯೂಸ್

ಪುತ್ತೂರು, ಜು12: ರಾತ್ರೋರಾತ್ರಿ ಲಾರಿಗಳಲ್ಲಿ ಕೋಳಿ ಮಾಂಸ ತ್ಯಾಜ್ಯ ತುಂಬಿದ ಗೋಣಿ ಚೀಲಗಳನ್ನು ತಲೆಂಜಿ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗಿದ್ದು, ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆ ಸಾಧ್ಯತೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಿಂದ ಕೌಡಿಚ್ಚಾರ್ ಮಾರ್ಗವಾಗಿ ಸುಳ್ಯಪದವು ಸಂಪರ್ಕಿಸುವಾಗ ಸಿಗುವ ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಲೆಂಜಿ ಎಂಬಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದೆರಡು ದಿನಗಳಿಂದ ಕಚ್ಛಾ ರಸ್ತೆಯ ಬದಿಯಲ್ಲೇ ರಾತ್ರಿ ಮರೆಯಲ್ಲಿ ದುಷ್ಕರ್ಮಿಗಳು...
ಸುದ್ದಿ

‘ ಗೋವು ಸುಖವಾಗಿದ್ದರೆ ಭೂಮಿ ಸ್ವರ್ಗ ‘ ; ಮಂಗಳೂರಿನ ಪುರಭವದಲ್ಲಿ ನಡೆದ ‘ ಸ್ವರ್ಗ ಸಂವಾದ ‘ ದಲ್ಲಿ ರಾಘವೇಶ್ವರಭಾರತೀ ಶ್ರೀ – ಕಹಳೆ ನ್ಯೂಸ್

ಮಂಗಳೂರು: ಗೋ ಸಂರಕ್ಷಣೆಯ ಸಂಕಲ್ಪ ನಮ್ಮಲ್ಲಿ ಜಾಗೃತವಾಗಿರಬೇಕು. ಗೋವು ಸುಖವಾಗಿದ್ದರೆ ಭೂಮಿ ಸ್ವರ್ಗವಾಗಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಿಸಿದರು. ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್‌ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಬುಧವಾರ ಆಯೋಜಿಸಲಾದ "ಸ್ವರ್ಗ ಸಂವಾದ-ಗೋಸಂಪದ ಸಮರ್ಪಣೆ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಶ್ರೀರಾಮ ದೇವ ಭಾನುRಳಿ ಮಠದ ಪರಿಸರದಲ್ಲಿ ಗೋವುಗಳ ಬೃಹತ್‌ ಆಲಯ ನಿರ್ಮಿಸಲಾಗಿದೆ....
ಸುದ್ದಿ

ಅನುಮತಿಯಿಲ್ಲದೆ ಆಧಾರ್ ತಿದ್ದುಪಡಿ: ಬಂಟ್ವಾಳದ ಜೆಡಿಎಸ್ ಮುಖಂಡನ ಮನೆಗೆ ತಹಶೀಲ್ದಾರ್ ದಾಳಿ – ಕಹಳೆ ನ್ಯೂಸ್

ಮಂಗಳೂರು: ಸರ್ಕಾರಿ ಅನುಮತಿಯಿಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತಿದ್ದ ಜೆಡಿಎಸ್ ಮುಖಂಡನೋರ್ವನ ಮನೆಗೆ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ಆಧಾರ್ ತಿದ್ದುಪಡಿಗೆ ಬಳಸುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೆಡಿಎಸ್ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ  ಹಾರೂನ್ ರಶಿದ್ (42)  ಮನೆಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಸಂದರ್ಭ ಹಾರೂನ್ ರಶೀದ್ ಮನೆಯಲ್ಲಿ ಪ್ರಾನ್ಸಿಸ್  ಪ್ರಶಾಂತ್  ಒಳಮೊಗರು ಎಂಬ ಓರ್ವ ಆಪರೇಟರ್...
1 1,403 1,404 1,405 1,406 1,407 1,459
Page 1405 of 1459