Wednesday, June 10, 2026

archivekahale news

ಸುದ್ದಿ

ಲೈಂಗಿಕ ಕಿರುಕುಳ ಆರೋಪದ ಮೇಲೆ 48 ಸಿಬ್ಬಂದಿಯನ್ನು ಕಿತ್ತೆಸೆದಿದ ಗೂಗಲ್ ಸಂಸ್ಥೆ – ಕಹಳೆ ನ್ಯೂಸ್

ಕಳೆದ ಎರಡು ವರ್ಷಗಳಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಟ್ಟು 48 ಸಿಬ್ಬಂದಿಯನ್ನು ಗೂಗಲ್ ಸಂಸ್ಥೆ ಕಿತ್ತೆಸೆದಿದೆ ಎಂದು ಸರ್ಚ್ ಇಂಜಿನ್ ಧೈತ್ಯ ಗೂಗಲ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್ ಪಿಚೈ ಹೇಳಿದ್ದಾರೆ. ಲೈಂಗಿಕ ಕಿರುಕುಳ ಎದುರಿಸುತ್ತಿದ್ದ ಮೂವರು ಹಿರಿಯ ಅಧಿಕಾರಿಗಳನ್ನು ಗೂಗಲ್ ರಕ್ಷಿಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಮಾಡಿದ್ದ ವರದಿಯನ್ನು ತಳ್ಳಿಹಾಕಿದ ಅವರು, 'ನಾವು ಕಚೇರಿಯ ವಾತಾವರಣ ಸುರಕ್ಷಿತವಾಗಿರುವಂತೆಯೇ ನೋಡಿಕೊಂದಿದ್ದೇವೆ. ಇಂಥ ಆರೋಪಗಳು ಬಂದಲ್ಲಿ...
ಸುದ್ದಿ

ಮೀ ಟೂ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟು ನ್ಯಾಯ ಸಿಗುತ್ತದೆ ಎನ್ನುವುದು ಬಹಳ ಮುಖ್ಯ: ಜಯಮಾಲ – ಕಹಳೆ ನ್ಯೂಸ್

ಬೆಂಗಳೂರು: ಚಿತ್ರರಂಗದಲ್ಲಿ ಈಗ ಮೀ ಟೂ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಸದ್ಯ ಹಿರಿಯ ನಟಿ ಜಯಮಾಲ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮೀ ಟೂ ಎನ್ನುವುದು ಹೊಸ ಅಭಿಯಾನ. ಈ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟು ನ್ಯಾಯ ಸಿಗುತ್ತದೆ ಎನ್ನುವುದು ಬಹಳ ಮುಖ್ಯ. ಹೆಣ್ಣನ್ನು ಹರಾಜು ಹಾಕುವ ಕೆಲಸ ಯಾರು ಮಾಡಬಾರದು. ಹೆಣ್ಣು ಮುಕ್ತವಾಗಿ ಬಂದಾಗ ಈ ಸಮಾಜ ಯಾವಾಗಲೂ ಹೇಳುವುದು ಅವಳು ಅಂತವಳು, ಇಂತವಳು ಅಂತ. ಆದರೆ,...
ಸುದ್ದಿ

ಆಮ್ನೆಸ್ಟಿ ಇಂಡಿಯಾದ ಬೆಂಗಳೂರು ಕಚೇರಿಗೆ ಇ.ಡಿ. ಅಧಿಕಾರಿಗಳ ದಾಳಿ – ಕಹಳೆ ನ್ಯೂಸ್

ಬೆಂಗಳೂರು: ಕಾನೂನುಬಾಹಿರವಾಗಿ ವಿದೇಶದಿಂದ ಹಣ ಪಡೆದ ಆರೋಪದಲ್ಲಿ ಮಾನವ ಹಕ್ಕುಗಳ ಪರ ಹೋರಾಡುವ ಸರಕಾರೇತರ ಸಂಘಟನೆ ಆಮ್ನೆಸ್ಟಿ ಇಂಡಿಯಾದ ಬೆಂಗಳೂರು ಕಚೇರಿಯ ಮೇಲೆ ಇ.ಡಿ. ಅಧಿಕಾರಿಗಳ ತಂಡ ದಾಳಿ ಮಾಡಿದೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ ಇಂದಿರಾನಗರ 2 ನೇ ಹಂತದಲ್ಲಿರುವ ಅಮೆಸ್ಟಿ ಕಚೇರಿಗೆ ಶೋಧ ವಾರಂಟ್ ನೊಂದಿಗೆ ತೆರಳಿದ ಐದಕ್ಕೂ ಹೆಚ್ಚು ಅಧಿಕಾರಿಗಳ ತಂಡ ರಾತ್ರಿಯವರೆಗೂ ಪರಿಶೀಲನೆ ನಡೆಸಿತು. ಎನ್ ಜಿಒಗಳಿಗೆ ವಿದೇಶಗಳಿಂದ ಕಾನೂನು ಮತ್ತು ನಿಯಮ ಉಲ್ಲಂಘಿಸಿ...
ಸುದ್ದಿ

ಜಮಖಂಡಿ ವಿಧಾನಸಭೆ ಉಪಚುನಾವಣೆ: ಭರ್ಜರಿ ಪ್ರಚಾರ ನಡೆಸಲಿರುವ ಸಿದ್ದರಾಮಯ್ಯ – ಕಹಳೆ ನ್ಯೂಸ್

ಬೆಂಗಳೂರು: ಜಮಖಂಡಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಪರ ಮಾಜಿ ಸಿಎಂ ಸಿದ್ದರಾಮಯ್ಯ ಇಂದಿನಿಂದ ಮೂರು ದಿನ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಜಯಪುರ ಜಿಲ್ಲೆ ಬಬಲೇಶ್ವರದಿಂದ ಜಮಖಂಡಿ ಮತಕ್ಷೇತ್ರಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಪರ ಚಿಕ್ಕಳಕಿ ಗ್ರಾಮದಲ್ಲಿ ಭಾಷಣ ಮಾಡಲಿದ್ದಾರೆ. ಬಳಿಕ 12.30 ಕ್ಕೆ ಹಿರೇಪಡಸಲಗಿ ಗ್ರಾಮದಲ್ಲಿ ಸಭೆ ನಡೆಸಲಿದ್ದಾರೆ. ಸಂಜೆ 4.30 ಕ್ಕೆ ಮುತ್ತೂರು...
ಸುದ್ದಿ

ಜಪಾನಿನ ಹೊಕ್ಕೊಯ್ಡೋ ದಲ್ಲಿ ಭೂಕಂಪ: ರಿಕ್ಟರ್ ಮಾಪನದಲ್ಲಿ ತೀವ್ರತೆ ದಾಖಲೆ – ಕಹಳೆ ನ್ಯೂಸ್

ಜಪಾನ್: ಜಪಾನಿನ ಹೊಕ್ಕೊಯ್ಡೋ ಎಂಬಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 5.6 ತೀವ್ರತೆ ದಾಖಲಾಗಿದೆ.ಆದ್ರೆ ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಇತ್ತೀಚೆಗಷ್ಟೇ ಕೆನಡಾದ ವ್ಯಾಂಕೋವರ್ ದ್ವೀಪದಲ್ಲಿ 6.6 ತೀವ್ರತೆಯ ಭೂಕಂಪ ದಾಖಲಾಗಿತ್ತು.ಇನ್ನೂ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಈ ಶತಮಾನದಲ್ಲಿ ನಡೆದ ಅತ್ಯಂತ ಘೋರ ನೈಸರ್ಗಿಕ ವಿಕೋಪ ಎನ್ನಿಸಿಕೊಂಡ ಇದು, ಇಂಡೋನೇಷ್ಯಾದ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. 7.7 ತೀವ್ರತೆಯ...
ಸುದ್ದಿ

ಬಿಬಿಎಂಪಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ 5 ಕೋಟಿ ರೂ ದಂಡ – ಕಹಳೆ ನ್ಯೂಸ್

ಬೆಂಗಳೂರು: ತ್ಯಾಜ್ಯ ಬೆಂಗಳೂರಿನ ಬಹುದೊಡ್ಡ ಸಮಸ್ಯೆ ಅದರ ನಿರ್ವಹಣೆಯಲ್ಲಿ ಸೋತ ಬಿಬಿಎಂಪಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ 5 ಕೋಟಿ ರೂ ದಂಡ ವಿಧಿಸಿದೆ. ನಗರದ ಹೊರ ವಲಯದಲ್ಲಿರುವ ಬಾಗಲೂರಿನ ಕಲ್ಲು ಕ್ವಾರಿಯಲ್ಲಿ ಸುರಿದಿರುವ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆಂದು ನ್ಯಾಯಮಂಡಳಿ ಒಂದೂವರೆ ತಿಂಗಳ ಹಿಂದೆಯೇ ನಿರ್ದೇಶನ ನೀಡಿತ್ತು....
ಸುದ್ದಿ

ವಿವಾಹಿತ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆ – ಕಹಳೆ ನ್ಯೂಸ್

ಮೂಡುಬಿದಿರೆ: ವಿವಾಹಿತ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಮಾರ್ಪಾಡಿ ಗ್ರಾಮದ ಪೊನ್ನೆಚಾರಿ ರಸ್ತೆಯಲ್ಲಿರುವ ವಿಶ್ವಾಸ್ ತ್ರಿಭುವನ್ ಅಪರ‍್ಟ್ಮೆಂಟ್ನಲ್ಲಿ ವಾಸವಿದ್ದ ಭವ್ಯಾಮತ್ತು ಇವರ ಮಕ್ಕಳಾದ 5 ವರ್ಷ ಪ್ರಾಯದ ರೇವತಿ ಮತ್ತು 3 ವರ್ಷ ಪ್ರಾಯದ ಜ್ಯೋತಿ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 20 ರಂದು ಭವ್ಯಾ ಆಕೆಯ ಮನೆಯಿಂದ ತನ್ನಿಬ್ಬರು ಮಕ್ಕಳೊಂದಿಗೆ ಕಾಸರಗೋಡಿನಲ್ಲಿರುವ ತನ್ನ ತವರು ಮನೆಗೆಂದು ಬೆಳಗ್ಗೆ...
ಸುದ್ದಿ

ಮಹಿಳೆಯ ಮೇಲಿನ ದೌರ್ಜನ್ಯ ಆರೋಪ ಖಂಡಿಸಿ ಪ್ರತಿಭಟನೆ – ಕಹಳೆ ನ್ಯೂಸ್

ಮಂಗಳೂರು: ಮಹಿಳೆಯ ಮೇಲಿನ ದೌರ್ಜನ್ಯ ಆರೋಪವನ್ನ ಖಂಡಿಸಿ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು. ಕೈಕಂಬ ಸಮೀಪದ ಗಂಜಿಮಠ ನಿವಾಸಿ ಸಲೀಕಾ ಎಂಬವರ ಮೇಲೆ ಪತಿಯ ವಿರುದ್ಧದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯ ಎಸಗಿದ ಆರೋಪ ಬಜ್ಪೆ ಪೊಲೀಸ್ ಇನ್ ಸ್ಪೆಕ್ಟರ್ ಮೇಲೆ ಇದೆ. ಇವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಎಸ್‌ಡಿಪಿಐ ಮೂಲ್ಕಿ-ಮೂಡಬಿದ್ರೆ ಕ್ಷೇತ್ರ ಸಮಿತಿಯ ವತಿಯಿಂದ ಬಜ್ಪೆ ಪೊಲೀಸ್ ಠಾಣೆಯ ಮುಂದೆ...
1 1,316 1,317 1,318 1,319 1,320 1,459
Page 1318 of 1459