Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಪಡುಬಿದ್ರೆ ಟೋಲ್ ಗೇಟ್ ಸಮಸ್ಯೆ ಪರಿಹರಿಸಿ, ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ, ಸರ್ವಿಸ್ ಮಾಲಕರ ಸಂಘದ ಪ್ರತಿಭಟನೆ-ಕಹಳೆ ನ್ಯೂಸ್

ಪಡುಬಿದ್ರೆ : ಪಡುಬಿದ್ರಿ ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುವ ಬಸ್ ಗಳ ಸೇವೆಯನ್ನು ನಿಲ್ಲಿಸಿ, ಪಡುಬಿದ್ರೆ ಟೋಲ್ ಗೇಟ್ ಸಮಸ್ಯೆ ಪರಿಹರಿಸಿ, ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ, ಸರ್ವಿಸ್ ಮಾಲಕರ ಸಂಘವು ಪ್ರತಿಭಟನೆ ನಡೆಸುತ್ತಿದೆ. ಸ್ಥಳೀಯ ಸರ್ವಿಸ್ ಬಸ್‍ಗಳಿಗೆ ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ ಸರ್ವಿಸ್ ಬಸ್ ಸಂಚಾರವನ್ನು ಬಂದ್ ಮಾಡಿ ಅನಿರ್ದಿಷ್ಟ ಅವಧಿಯವರೆಗೆ ಪ್ರತಿಭಟಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 26 ಬಸ್‍ಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ,...
ಹೆಚ್ಚಿನ ಸುದ್ದಿ

“ಜೀವನ ಮೌಲ್ಯಗಳನ್ನು ತಿಳಿಸಬೇಕಾದುದು ಶಾಲೆಯ ಕರ್ತವ್ಯ”; ಡಾ. ಪ್ರಭಾಕರ್ ಭಟ್ ಕಲ್ಲಡ್ಕ -ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ರ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು. ಅತಿಥಿ ಗಣ್ಯರಿಂದ ಭಾರತ ಮಾತೆಗೆ ದೀಪ ಪ್ರಜ್ವಲನೆಯ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ “ಜೀವನ ಮೌಲ್ಯಗಳನ್ನು ತಿಳಿಸಬೇಕಾದುದು ಶಾಲೆಯ ಕರ್ತವ್ಯ. ಈ ಶಾಲೆಯು ಭಾರತೀಯ ಸನಾತನ ಮಾದರಿಯ ಶಿಕ್ಷಣವನ್ನು ಮಗುವಿಗೆ...
ಹೆಚ್ಚಿನ ಸುದ್ದಿ

ಕೊಯಿಲದಲ್ಲಿ ಶಿವ ರಾತ್ರಿಯ ದಿನ ಗೇಟು ಕಿತ್ತಸೆದ ಕಿಡಿಗೇಡಿಗಳು –ಕಹಳೆ ನ್ಯೂಸ್

ಆಲಂಕಾರು : ಶಿವರಾತ್ರಿಯ ದಿನ ಕಡಬ ತಾಲೂಕಿನ ಕೊಯಿಲದ ಪಶುಸಂಗೋಪನ ಇಲಾಖಾ ಜಾಗದಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಗೆ ಅಳವಡಿಸಲಾಗಿರುವ ಗೇಟಿನ ಪಕ್ಕದಲ್ಲಿರುವ ಪಾದಾಚಾರಿ ಗೇಟನ್ನು ಕಿಡಿಗೇಡಿಗಳು ಕಿತ್ತೆಸೆದಿದ್ದಾರೆ. ಗೋಕುಲುನಗರ ಪ್ರವೇಶ ದ್ವಾರದ ಪಕ್ಕದಲ್ಲಿದ್ದ ಎರಡು ಗೇಟುಗಳ ಪೈಕಿ ಒಂದು ಗೇಟನ್ನು ಬುಡ ಸಮೇತ ಕಿತ್ತು ಹಾಕಲಾಗಿದ್ದು, ಇತ್ತೀಚಿನ ಕೆಲವು ತಿಂಗಳಿಂದ ಇಲಾಖಾ ಜಾಗದಲ್ಲಿ ಹಾದು ಹೋಗುವ ರಸ್ತೆಯನ್ನು ರಾತ್ರಿ ಸಮಯದಲ್ಲಿ ಮುಚ್ಚಲಾಗುತ್ತದೆ. ಕಟ್ಟುನಿಟ್ಟಿನ ಕ್ರಮದಿಂದ ಕಿಡಿಗೇಡಿಗಳು ಜಾಗದ ಒಳಗಡೆ...
ಹೆಚ್ಚಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀರಾಮನಿಗೆ ಹೋಲಿಸಿದ ಉತ್ತರಾಖಂಡ್ ದ ಮುಖ್ಯಮಂತ್ರಿ ತಿರಾಥ್ ರಾವತ್-ಕಹಳೆ ನ್ಯೂಸ್

ಡೆಹ್ರಾಡೂನ್ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರಾಖಂಡ್ ನೂತನ ಮುಖ್ಯಮಂತ್ರಿ ತಿರಾಥ್ ರಾವತ್ ಅವರು ಶ್ರೀರಾಮನಿಗೆ ಹೋಲಿಸಿದ್ದಾರೆ. ಅವರು ಡೆಹ್ರಾಡೂನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀರಾಮ ಮಾಡಿದ ಒಳ್ಳೆಯ ಕೆಲಸಗಳಿಗೆ ಜನರು ರಾಮನನ್ನು ಪೂಜಿಸುತ್ತಿದ್ದು, ಅದೇ ರೀತಿ ಮುಂದಿನ ದಿನಗಳಲ್ಲಿ ಜನರು ಮೋದಿ ಅವರನ್ನು ಆರಾಧಿಸಲಿದ್ದಾರೆ ಎಂದು ತಿರಾಥ್ ರಾವತ್ ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆ ಅವರು ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು....
ಹೆಚ್ಚಿನ ಸುದ್ದಿ

ವಿಟ್ಲದಲ್ಲಿ ಶಾರ್ಟ್ ಸಕ್ಯೂಟ್‍ನಿಂದ ಹೊತ್ತಿ ಉರಿದ ಗ್ಯಾರೇಜ್- ಕಹಳೆನ್ಯೂಸ್

ವಿಟ್ಲ: ಕಬಕ-ವಿಟ್ಲ ರಸ್ತೆಯ ಚಂದಳಿಕೆ ಎಂಬಲ್ಲಿ ಶಾರ್ಟ್ ಸಕ್ಯೂಟ್‍ನಿಂದ ಗ್ಯಾರೇಜ್ ಹೊತ್ತಿ ಉರಿದಿದೆ. ಗ್ಯಾರೇಜ್‍ನಲ್ಲಿದ್ದ ಲಕ್ಷಾಂತರ ಮೌಲ್ಯದ ಸೊತ್ತು ಬೆಂಕಿಗಾಹುತಿಯಾಗಿದ್ದು, ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಆದ್ರೆ ಗ್ಯಾರೇಜ್‍ನ ಒಳಗಡೆ ಗ್ಯಾಸ್ ಸಿಲಿಂಡರ್ ಇರುವುದು ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ....
ಹೆಚ್ಚಿನ ಸುದ್ದಿ

ಶತಾಯುಷಿ ಕಥಕ್ಕಳಿ ಮಾಂತ್ರಿಕ 105 ವರ್ಷದ ಚೆಮಂಚೇರಿ ಕುನ್ಹಿರಾಮನ್ ನಾಯರ್ ನಿಧನ-ಕಹಳೆ ನ್ಯೂಸ್

ಕೋಝಿಕ್ಕೋಡು : ಕೇರಳದ ಕೋಝಿಕ್ಕೋಡು ಜಿಲ್ಲೆಯ ಕೊಯಿಲಾಂಡಿ ಸಮೀಪ ಚೆಲಿಯಾ ಎಂಬಲ್ಲಿ ಇಂದು ಬೆಳಗ್ಗೆ ಕಥಕ್ಕಳಿ ಮಾಂತ್ರಿಕ 105 ವರ್ಷದ ಚೆಮಂಚೇರಿ ಕುನ್ಹಿರಾಮನ್ ನಾಯರ್ ಅವರು ಕೊನೆಯುಸಿಳೆದಿದ್ದಾರೆ. ಕುನ್ಹಿರಾಮನ್ ಅವರು ತನ್ನ 90 ವರ್ಷ ಪ್ರಾಯದವರೆಗೂ ಕಥಕ್ಕಳಿ ನೃತ್ಯ ಮಾಡುತ್ತಿದ್ದು, ಕೃಷ್ಣ ಹಾಗೂ ಕುಚೇಲ ಪಾತ್ರಗಳು ಬಹಳ ಪ್ರಖ್ಯಾತವಾಗಿದ್ದವು. ಇನ್ನು ಅವರು 100ನೇ ವಯಸ್ಸಿನಲ್ಲಿ ಕೋಝಿಕ್ಕೋಡುನಲ್ಲಿ ಗುರು ಪರಶುರಾಮ ಪಾತ್ರವನ್ನು ನೃತ್ಯ ಮಾಡಿದ್ದು, ಅದುವೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು...
ಹೆಚ್ಚಿನ ಸುದ್ದಿ

ಕೊರೋನಾ ಭೀತಿಯಿಂದಾಗಿ ನಾಗ್ಪುರದಲ್ಲಿ ಇಂದಿನಿಂದ ಮಾರ್ಚ್ 21ರವರೆಗೆ ಲಾಕ್ ಡೌನ್ ಘೋಷಣೆ-ಕಹಳೆ ನ್ಯೂಸ್

ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ನಿರಂತರವಾಗಿ ಕೊರೋನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ನಾಗ್ಪುರದಲ್ಲಿ ಇಂದಿನಿಂದ ಒಂದು ವಾರದವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ನಾಗ್ಪುರ್ ದ ಉಸ್ತುವಾರಿ ಸಚಿವ ನಿತಿನ್ ರಾವುತ್ ಅವರ ನೇತೃತ್ವದಲ್ಲಿ ಮಾರ್ಚ್ 15ರಿಂದ ಮಾರ್ಚ್ 21ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸುವುದಾಗಿ ನಿರ್ಧಾರ ಕೈಗೊಳ್ಳಲಾಗಿದ್ದು, ಸಾಪ್ತಾಹಿಕ ಮಾರುಕಟ್ಟೆಗಳು, ಶೈಕ್ಷಣಿಕ ಸಂಸ್ಥೆಗಳು, ಮದುವೆ ಸಭಾಂಗಣಗಳು ಮತ್ತು ಇತರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮುಚ್ಚುವಂತೆ ಆದೇಶಿಸಿಸಲಾಗಿದೆ....
ಹೆಚ್ಚಿನ ಸುದ್ದಿ

ರಾಜ್ಯ ಬಜೆಟ್’ನಲ್ಲಿ ಈಡೇರದ ಬೇಡಿಕೆ; ಇಂದು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ-ಕಹಳೆ ನ್ಯೂಸ್

ರಾಜ್ಯ ಸರ್ಕಾರದ ಬಜೆಟ್’ನಲ್ಲಿ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಂದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಅಂಗನವಾಡಿ ಬಂದ್ ಮಾಡಿ, ಅಂಗನವಾಡಿ ಕಾರ್ಯಕರ್ತರು ಇಂದು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಪ್ರತಿಭಟನೆಗೆ ಹೆಚ್ಚೆನ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತರು ಸಹಾಯಕಿಯರು ಭಾಗವಹಿಸುವ ಸಾಧ್ಯತೆ ಇದೆ....
1 80 81 82 83 84 174
Page 82 of 174