ವಿವೇಕಾನಂದ ಪ. ಪೂ ಕಾಲೇಜಿನ ವತಿಯಿಂದ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ನಾಯಕನಿಗೆ ಸನ್ಮಾನ
ಪುತ್ತೂರು: ಭಾರತೀಯ ವಾಯುಪಡೆಯಲ್ಲಿ ಇಂಜಿನಿಯರಿಂಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸ್ಕ್ವಾಡ್ರನ್ ನಾಯಕ ಶರತ್ ಬಿ ಮಾಧವ ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ರವರು ಶರತ್ ಬಿ ಮಾಧವರವರಿಗೆ ಶಾಲು ಹೊದಿಸಿ, ಪುಸ್ತಕ ನೀಡಿ ಸನ್ಮಾನಿಸಿದರು. ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತೆಂಕಿಲದ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ,ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ...







