ಉಡುಪಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಮತ್ತು ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋ- ವಿಡಿಯೋ ಚಿತ್ರೀಕರಣ ನಿಷೇಧ -ಕಹಳೆ ನ್ಯೂಸ್
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಮತ್ತು ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋ- ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಪರ್ಯಾಯ ಪುತ್ತಿಗೆ ಮಠದಿಂದ ಈ ಬಗ್ಗೆ ಸೂಚನೆ ನೀಡಲಾಗಿದೆ. ಗುರುವಾರ (ಏ.10) ಈ ಬಗ್ಗೆ ಪ್ರಕಟಣೆ ನೀಡಿರುವ ಮಠದ ವಿದ್ವಾನ್ ಗೋಪಾಲ ಆಚಾರ್ಯ ಅವರು, ಯಾವುದೇ ದೇವಸ್ಥಾನದ ರಥಬೀದಿಗೆ ಪಾವಿತ್ರ್ಯತೆ, ಅದರದೇ ಆದ ನಿಯಮ ಇರುತ್ತದೆ. ಭಕ್ತರು ಅದನ್ನು ಶೃದ್ಧೆಯ ತಾಣವಾಗಿ ಗೌರವಿಸುತ್ತಾರೆ. ಅಲ್ಲಿ ಉತ್ಸವ ನಡೆಯುತ್ತದೆ. ಹೀಗಾಗಿ ಅದು...







