Friday, May 1, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ಮುಳಿಯ ಜುವೆಲರ್ಸ್‌ ಕ್ಯಾಲೆಂಡರ್‌ನಲ್ಲಿ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಯ ರೂಟ್‌ ಮ್ಯಾಪ್‌ -ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆಯ ಅಂಗವಾಗಿ ನಡೆಯುವ ಪೇಟೆ ಸವಾರಿಯು ಭಕ್ತರು ಮತ್ತು ಸಾರ್ವಜನಿ ಕರನ್ನು ಒಂದುಗೂಡಿಸುವ ವಿಶಿಷ್ಟ ಆಚರಣೆ. ಈ ಬಾರಿಯ ಜಾತ್ರೋತ್ಸವದ ಪೇಟೆ ಸವಾರಿಯ ರೂಟ್‌ ಮ್ಯಾಪ್‌ ಅನ್ನು ಒಳಗೊಂಡ ವಿಶೇಷ ಕ್ಯಾಲೆಂಡರ್‌ ಅನ್ನು ಪುತ್ತೂರಿನ ಮುಳಿಯ ಜುವೆಲರ್ಸ್‌ ಸಂಸ್ಥೆಯು ಬಿಡುಗಡೆ ಮಾಡಿದೆ.

ಜಾತ್ರೆಯ ಪೇಟೆ ಸವಾರಿಯ ರೂಟ್‌ ಮ್ಯಾಪ್‌ ಅನ್ನು ಒಳಗೊಂಡ ವಿಶೇಷ ಕ್ಯಾಲೆಂಡರ್‌ ಅನ್ನು ಪುತ್ತೂರಿನ ಮುಳಿಯ ಜುವೆಲ್ಲರ್ಸ್‌ ಸಂಸ್ಥೆಯು ಬಿಡುಗಡೆ ಮಾಡಿದೆ. ಮುಳಿಯ ಜುವೆಲರ್ಸ್‌ ಕೇವಲ ಆಭರಣ ವ್ಯಾಪಾರದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದೆ. ಅದರ ಮುಂದುವರಿಕೆಯಾಗಿ, ಈ ವರ್ಷದ ಮಹಾಲಿಂಗೇಶ್ವರ ದೇವರ ಜಾತ್ರೆ ಪೇಟೆ ಸವಾ ರಿಯ ನಿಖರವಾದ ಮಾರ್ಗವನ್ನು ತಿಳಿಸುವ ಕ್ಯಾಲೆಂಡರ್‌ ಅನ್ನು ಹೊರತರುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಎ 10 ರಿಂದ ಶ್ರೀ ದೇವರ ಪೇಟೆ ಸವಾರಿ ಆರಂಭಗೊಂಡು ಎ 18ರ ವರೆಗೆ ಪುತ್ತೂರು ನಗರದ ವಿವಿಧ ಮಾರ್ಗಗಳಲ್ಲಿ ಹಾದು ಹೋಗುತ್ತದೆ. ಪ್ರತಿದಿನ ಪ್ರತ್ಯೇಕ ರಸ್ತೆಗಳಲ್ಲಿ ದೇವರ ಪೇಟೆ ಸವಾರಿ ಸಾಗಲಿದ್ದು ಈ ವೇಳೆ ನಿಗದಿತ ದೇವರ ಕಟ್ಟೆಗಳಲ್ಲಿ ದೇವರಯ ಕಟ್ಟೆ ಪೂಜೆ ಸ್ವೀಕರಿಸಲಿದ್ದಾರೆ. ಈ ಕ್ಯಾಲೆಂಡರ್‌ನಲ್ಲಿ ಪೇಟೆ ಸವಾರಿಯು ಯಾವ ದಿನಾಂಕದಂದು ಯಾವ ಮಾರ್ಗದಲ್ಲಿ ನಡೆಯಲಿದೆ ಎನ್ನುವುದನ್ನು, ಅದು ಪ್ರಾರಂಭವಾಗುವ ಸ್ಥಳ, ಹಾದುಹೋಗುವ ಮುಖ್ಯ ರಸ್ತೆಗಳು ಮತ್ತು ತಲುಪುವ ಅಂತಿಮ ಸ್ಥಳದ ಸ್ಪಷ್ಟವಾದ ಮಾಹಿತಿಯನ್ನು ನೀಡಲಾಗಿದೆ. ಮಾರ್ಗವನ್ನು ಕೆಂಪು ಬಣದಲ್ಲಿ ದಪ್ಪಾಕ್ಷರದಲ್ಲಿ ಬರೆಯಿಸಲಾಗಿದ್ದು, ಸುಲಭದಲ್ಲಿ ಕಣ್ಣಿಗೆ ಗೋಚರಿಸುವಂತೆ ಪ್ರಕಟಿಸಲಾಗಿದೆ.

ಇದರ ಜತೆಗೆ ಜಾತ್ರೋತ್ಸವದ ಇತರ ಪ್ರಮುಖ ವಿವರಗಳನ್ನು ಸಹ ನಮೂದಿಸಲಾಗಿದೆ. ಗೊನೆ ಮುಹೂರ್ತ, ಧ್ವಜಾರೋಹಣ, ರಥೋತ್ಸವ, ಧ್ವಜಾ ವರೋಹಣ ಇತ್ಯಾದಿ ಮಾಹಿತಿಗಳು ಇವೆ. ಈ ರೂಟ್‌ ಮ್ಯಾಪ್‌ ಭಕ್ತರಿಗೆ ಸವಾರಿಯ ಮಾರ್ಗವನ್ನು ತಿಳಿದುಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಪೇಟೆ ಸವಾರಿಯ ಸಂದರ್ಭದಲ್ಲಿ ಸಂಭವಿಸಬಹುದಾದ ಟ್ರಾಫಿಕ್‌ ಬದಲಾವಣೆಗಳ ಬಗ್ಗೆಯೂ ಇದು ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡುತ್ತದೆ.

ಪುತ್ತೂರು ನಗರದ ನಿವಾಸಿಗಳಿಗೆ ದೇವರ ಪೇಟೆ ಸವಾರಿಯು ಯಾವ ಮಾರ್ಗದಲ್ಲಿ ಸಾಗುತ್ತದೆ ಎಂಬುದು ತಿಳಿದಿದ್ದರೂ ಪುತ್ತೂರಿನ ಹೊರಗಿನ ಭಕ್ತರು ಮತ್ತು ಗ್ರಾಹಕರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇರುವುದು ಕಡಿಮೆ. ಜಾತ್ರೆಯ ಸಮಯದಲ್ಲಿ ಪುತ್ತೂರಿಗೆ ಬರುವ ಅವರು ದೇವರ ಪೇಟೆ ಸವಾರಿ ಮತ್ತು ಕಟ್ಟೆಪೂಜೆಯಲ್ಲಿ ಭಾಗವಹಿಸಲು ಅನುಕೂಲವಾಗಲೆಂಬ ಉದ್ದೇಶದಿಂದ ಹಾಗೂ ಯಾವ ದಿನಾಂಕದಂದು ಬಂದರೆ ಉತ್ತಮ ಎನ್ನುವುದನ್ನು ಮುಂಚಿತವಾಗಿ ನಿರ್ಧರಿಸಿಕೊಳ್ಳಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಈ ಕ್ಯಾಲೆಂಡರ್‌ ಅನ್ನು ಸಿದ್ಧಪಡಿಸಲಾಗಿದೆ. ನಾನು ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷನಾಗಿದ್ದಾಗ, ಇಂತಹದೊಂದು ಕ್ಯಾಲೆಂಡರ್‌ ಇದ್ದರೆ ದೂರದ ಊರುಗಳಲ್ಲಿರುವ ಮಹಾಲಿಂಗೇಶ್ವರನ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಅನಿಸಿತು. ಅದಕ್ಕಾಗಿಯೇ ಈ ಪ್ರಯತ್ನವನ್ನು ಮಾಡಿದ್ದೇವೆ. ಗ್ರಾಹಕರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.