Thursday, March 12, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

SBI ಲಾಕರ್ ಬಾಡಿಗೆ ಶುಲ್ಕ ಮತ್ತಿತರ ಮಾಹಿತಿ -ಕಹಳೆ ನ್ಯೂಸ್

ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡಬೇಕು ಎಂಬುದನ್ನು ಯಾರು ನಿರೀಕ್ಷೆ ಮಾಡಲ್ಲ? ಬ್ಯಾಂಕ್ ಲಾಕರ್ ಗಳಲ್ಲಿ ಬೆಲೆ ಬಾಳುವ ವಸ್ತುಗಳು, ಕಾಗದ- ಪತ್ರಗಳನ್ನು ಬಹಳ ಮಂದಿ ಬಯಸುತ್ತಾರೆ. ಅಂದ ಹಾಗೆ ಬ್ಯಾಂಕ್ ಗಳು ಒದಗಿಸುವ ಹಲವು ಸೇವೆಗಳಲ್ಲಿ ಲಾಕರ್ ವ್ಯವಸ್ಥೆಯೂ ಒಂದು. ಈ ಲಾಕರ್ ಗಳು ಸಣ್ಣ, ಮಧ್ಯಮ, ದೊಡ್ಡ ಹಾಗೂ ಅತಿದೊಡ್ಡ ಅಳತೆಯ ಲಾಕರ್ ಗಳು ದೊರೆಯುತ್ತವೆ. ಅಂದ ಹಾಗೆ ಬ್ಯಾಂಕ್ ಲಾಕರ್ ಗಳ ಬಾಡಿಗೆ ಏನೂ ಕಡಿಮೆ ಅಲ್ಲ....
ಹೆಚ್ಚಿನ ಸುದ್ದಿ

ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯನವರದ್ದು ನಾಯಿಪಾಡು-ನಳಿನ್​ಕುಮಾರ್ ಕಟೀಲ್-ಕಹಳೆ ನ್ಯೂಸ್

ಮಂಗಳೂರು: ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದರೆ ಬಿಜೆಪಿ ಸೇರಿದ 17 ಶಾಸಕರದ್ದು ನಾಯಿಪಾಡು ಎಂದು ಹೇಳಿಕೆ ಕೊಟ್ಟ ಸಿದ್ದರಾಮಯ್ಯನವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರು ಕಟುವಾಗಿ ತಿರುಗೇಟು ನೀಡಿದ್ದಾರೆ. ಸದ್ಯ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯನವರದ್ದು ನಾಯಿಪಾಡಾಗಿದೆ. ಅವರು ವಲಸೆ ಬಂದವರು ಎಂಬ ಕಾರಣಕ್ಕೆ ಮೂಲೆಗುಂಪು ಮಾಡಲಾಗುತ್ತಿದೆ ಎಂದು ನಳಿನ್​ಕುಮಾರ್ ಕಟೀಲ್​ ವ್ಯಂಗ್ಯವಾಡಿದರು. ದಿನನಿತ್ಯ ಪ್ರಚಾರ ಮಾಡಲು ಡಿ.ಕೆ.ಶಿವಕುಮಾರ್​ ಕೈ ಮೇಲಾಗುತ್ತಿದೆ. ಆ ಹತಾಶೆಯಿಂದ ಹೀಗೆಲ್ಲ ಮಾತನಾಡುತ್ತಿದ್ದಾರೆ. ಅವರೊಬ್ಬ...
ಹೆಚ್ಚಿನ ಸುದ್ದಿ

ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ ಎಂದು ಕೆಲಸ ಸಿಕ್ಕ ಖುಷಿಯಲ್ಲಿ ಪ್ರಾಣಕೊಟ್ಟು ಹರಕೆ ತೀರಿಸಿದ-ಕಹಳೆ ನ್ಯೂಸ್

ಕೆಲಸವಿಲ್ಲ ಎಂದು ಪರಿತಪಿಸುತ್ತಿದ್ದ ವ್ಯಕ್ತಿ, ಒಂದೊಳ್ಳೆ ಉದ್ಯೋಗ ಸಿಕ್ಕ ತಕ್ಷಣ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದಾಗಿ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾನೆ. ತಮಿಳುನಾಡಿನ ನಾಗರ್​​​ಕೊಯಿಲ್​​ ನಿವಾಸಿ ನವೀನ್​ (32) ಮೃತ. ಜೀವನದಲ್ಲಿ ತುಂಬ ದಿನಗಳಿಂದ ಉದ್ಯೋಗ ಸಿಕ್ಕಿರಲಿಲ್ಲ ಎಂದು ನೊಂದಿದ್ದ. ಹಾಗೇ 'ನನಗೊಂದು ಒಳ್ಳೆಯ ಕೆಲಸ ಸಿಕ್ಕಿಬಿಟ್ಟರೆ ನಾನು ಬಂದು ನಿನ್ನೊಂದಿಗೇ ಇರುತ್ತೇನೆ' ಎಂದು ದೇವರಿಗೆ ಹರಕೆಯನ್ನೂ ಕಟ್ಟಿಕೊಂಡಿದ್ದ. ಅದಾದ...
ಹೆಚ್ಚಿನ ಸುದ್ದಿ

ಹಣ ವಂಚನೆ ಪ್ರಕರಣ ಸಂಬಂಧ ಸಿಸಿಬಿ ಕಚೇರಿಗೆ ಆಗಮಿಸಿದ ಎಸ್.ನಾರಾಯಣ್-ಕಹಳೆ ನ್ಯೂಸ್

ಬೆಂಗಳೂರು: ಸಿನಿಮಾ ನಿರ್ಮಾಣದ ನೆಪದಲ್ಲಿ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರಿಗೆ 1.6 ಕೋಟಿ ರೂಪಾಯಿ ವಂಚನೆ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರನ್ನು ಭೇಟಿಯಾದ ನಾರಾಯಣ್ ದಾಖಲೆ ಸಲ್ಲಿಸಿದ್ದಾರೆ. ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ತೆರಳಿದ ನಾರಾಯಣ್ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಅವರಿಗೆ ದಾಖಲೆ ನೀಡಿದ್ದಾರೆ. ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ನಿರ್ಮಾಣ ಮಾಡುವುದಾಗಿ ಐದು ಮಂದಿ ಬಂದಿದ್ದು ಅವರ ಮಾತು ನಂಬಿ ಸಿನಿಮಾ ಶುರು ಮಾಡಿದ್ದೆ....
ಹೆಚ್ಚಿನ ಸುದ್ದಿ

ದೈನಂದಿನ ಜೀವನದಲ್ಲಿ ಹೆಚ್ಚು ಕನ್ನಡ ಬಳಸಿ-ಬಿ.ಎಸ್. ಯಡಿಯೂರಪ್ಪ-ಕಹಳೆ ನ್ಯೂಸ್

ಬೆಂಗಳೂರು: 65ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕನ್ನಡ ಭಾಷೆ ಉಳಿವಿಗಾಗಿ ಹೆಚು ಹೆಚ್ಚು ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಕರೆ ನೀಡಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು. ದೈನಂದಿನ ಜೀವನದಲ್ಲಿ, ವ್ಯವಹಾರಗಳಲ್ಲಿ ಹೆಚ್ಚು ಕನ್ನಡ ಬಳಸಿ, ಮಕ್ಕಳ ಜೊತೆಯೂ ಕನ್ನಡದಲ್ಲಿಯೇ ಮಾತನಾಡಿ....
ಹೆಚ್ಚಿನ ಸುದ್ದಿ

ಸಾರ್ವಜನಿಕರೇ ಗಮನಿಸಿ: ನಾಳೆಯಿಂದ ಬದಲಾಗಲಿದೆ ಈ ಎಲ್ಲ ನಿಯಮಗಳು-ಕಹಳೆ ನ್ಯೂಸ್

ನಾಳೆ ನವೆಂಬರ್ ಒಂದು. ನಾಳೆಯಿಂದ ಅನೇಕ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್ಪಿಜಿ ಸಿಲಿಂಡರ್ ನಿಂದ ಹಿಡಿದು ರೈಲ್ವೆ ಟೈಮ್ ಟೇಬಲ್ ವರೆಗೆ ಅನೇಕ ಸಂಗತಿಗಳಲ್ಲಿ ಬದಲಾವಣೆಯಾಗಲಿದೆ. ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯ ನಿಯಮಗಳು ನವೆಂಬರ್ 1 ರಿಂದ ಬದಲಾಗಲಿದೆ. ತೈಲ ಕಂಪನಿಗಳು ನವೆಂಬರ್ 1 ರಿಂದ ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ವ್ಯವಸ್ಥೆಯನ್ನು ಜಾರಿಗೆ ತರಲಿವೆ. ಸಿಲಿಂಡರ್ ಸ್ವೀಕರಿಸುವ ಮೊದಲು ಗ್ರಾಹಕರ ನೋಂದಾಯಿತ ಮೊಬೈಲ್...
ಹೆಚ್ಚಿನ ಸುದ್ದಿ

28ವರ್ಷಗಳ ಬಳಿಕ ಅಯೋಧ್ಯಾ ಶ್ರೀರಾಮನ ಸನ್ನಿಧಿಯಲ್ಲಿ ದೀಪಾವಳಿ -ಕಹಳೆ ನ್ಯೂಸ್

ಅಯೋಧ್ಯಾ: 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ವಿವಾದಿತ ಪ್ರದೇಶದಲ್ಲಿ ಯಾವುದೇ ಹಬ್ಬಗಳ ಆಚರಣೆ ಇರ್ಲಿಲ್ಲ. ಆದ್ರೆ, ಈಗ ರಾಮಮಂದಿರ ನಿರ್ಮಾಣವಾಗುತ್ತಿದ್ದು, ದೀಪಾವಳಿ ಆಚರಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಮೂಲಕ ಬರೋಬ್ಬರಿ 28 ವರ್ಷಗಳ ನಂತ್ರ ರಾಮ ಮಂದಿರದಲ್ಲಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಹೌದು, ಇಷ್ಟು ವರ್ಷಗಳ ಕಾಲ ಪುಟ್ಟ ಟೆಂಟ್​​ನಲ್ಲಿದ್ದ ಶ್ರೀರಾಮನ ವಿಗ್ರಹವನ್ನ ತಾತ್ಕಾಲಿಕವಾಗಿ ದೇಗುಲದ ಆವರಣಕ್ಕೆ ವರ್ಗಾವಣೆ ಮಾಡಲಾಗಿದೆ. ಅದೇ ಜಾಗದಲ್ಲಿಯೇ ದೀಪಾವಳಿಯನ್ನ ಸಂಭ್ರಮದಿಂದ ಆಚರಿಸಲು...
ಹೆಚ್ಚಿನ ಸುದ್ದಿ

ಕೇವಲ ಮದುವೆಗಾಗಿ ಮತಾಂತರ ಸ್ವೀಕಾರಾರ್ಹವಲ್ಲ..! ಹೈಕೋರ್ಟ್ ಮಹತ್ವದ ತೀರ್ಪು-ಕಹಳೆ ನ್ಯೂಸ್

ಲಖ್ನೋ: ಕೇವಲ ಮದುವೆ ಉದ್ದೇಶದಿಂದ ಧಾರ್ಮಿಕ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಅಂತರ್ಧರ್ಮೀಯ ವಿವಾಹವಾದ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್ ಕೇವಲ ಮದುವೆಯ ಉದ್ದೇಶದಿಂದ ಧಾರ್ಮಿಕ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಭಿಪ್ರಾಯಪಟ್ಟಿದೆ. ಪಶ್ಚಿಮ ಉತ್ತರಪ್ರದೇಶದ ಮುಜಾಫರ್ನಗರದ ದಂಪತಿ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಹುಡುಗಿಯ ತಂದೆ ದಾಂಪತ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪೊಲೀಸ್...
1 152 153 154 155 156 174
Page 154 of 174