Tuesday, March 17, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಗಣರಾಜ್ಯೋತ್ಸವದಂದು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಆರಂಭ-ಕಹಳೆ ನ್ಯೂಸ್

ಲಕ್ನೋ : ಗಿಡ ನೆಡುವ ಅಭಿಯಾನ ಹಾಗೂ ರಾಷ್ಟ್ರ ಧ್ವಜಾರೋಹಣದೊಂದಿಗೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಗಣರಾಜ್ಯೋತ್ಸವದಂದು ಚಾಲನೆ ನೀಡಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಸುಪ್ರೀಂಕೋರ್ಟ್‍ನ ಐತಿಹಾಸಿಕ ತೀರ್ಪಿನ ಅನ್ವಯ ಜಿಲ್ಲೆಯಲ್ಲೇ ಮಸೀದಿ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವಂತೆ ಸೂಚಿಸಿದ ಕಾರಣದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ದೇಗುಲು ನಿರ್ಮಾಣವಾಗುವ ಸ್ಥಳದಿಂದ 25 ಕಿಲೋ ಮೀಟರ್ ದೂರದಲ್ಲಿ ಮಂಜೂರು ಮಾಡಲಾಗಿರುವ ಐದು ಎಕರೆ ಜಮೀನಿನಲ್ಲಿ ಭವ್ಯ ಮಸೀದಿ ನಿರ್ಮಾಣದ ಕಾರ್ಯವನ್ನು...
ಹೆಚ್ಚಿನ ಸುದ್ದಿ

ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಬೋನಿಗೆ ಬಿದ್ದ ಚಿರತೆ-ಕಹಳೆ ನ್ಯೂಸ್

ಗಂಗಾವತಿ : ಗಂಗಾವತಿ ತಾಲೂಕಿನ ಆನೆಗೊಂದಿಯ ಐತಿಹಾಸಿಕ ದುರ್ಗಾದೇವಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೋಮವಾರ ಬೆಳಗ್ಗೆ ಚಿರತೆ ಬಿದ್ದಿದೆ. ಅಂದಾಜು 6 ರಿಂದ 7 ವರ್ಷದ ಗಂಡು ಚಿರತೆ ಇದಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಆನೆಗೊಂದಿ ವ್ಯಾಪ್ತಿಯಲ್ಲಿಯೇ ಕಳೆದ ಮೂರು ತಿಂಗಳಿಂದ ಚಿರತೆ ಸೆರೆಹಿಡಿಯಲು ಬೀಡುಬಿಟ್ಟಿತ್ತು. ಇದೇ ಬೆಟ್ಟದಲ್ಲಿ ಕಳೆದ ತಿಂಗಳು ಚಿರತೆಯೊಂದನ್ನ ಸೆರೆಹಿಡಿಯಲಾಗಿತ್ತು. ಇದೀಗ ಎರಡನೇ ಚಿರತೆಯು ಬೋನಿಗೆ...
ಹೆಚ್ಚಿನ ಸುದ್ದಿ

ಇಂದಿನಿಂದ ಕೊರೋನಾ ಲಸಿಕೆ ಅಭಿಯಾನ ರಾಜ್ಯಾದ್ಯಂತ ಹೆಚ್ಚಿನ ಕೇಂದ್ರಗಳಲ್ಲಿ ನಡೆಯಲಿದೆ; ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್-ಕಹಳೆ ನ್ಯೂಸ್

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಇಂದಿನಿಂದ ಕೊರೋನಾ ಲಸಿಕೆ ಅಭಿಯಾನ ರಾಜ್ಯಾದ್ಯಂತ ಹೆಚ್ಚಿನ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಕೊರೋನಾ ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ. ಕೊರೋನಾ ಲಸಿಕೆಯನ್ನು ಡಾ. ಸುದರ್ಶನ್ ಬಲ್ಲಾಳ್ ಅವರು ಕೂಡ ಪಡೆದಿದ್ದು, ಅವರಿಗೂ ಯಾವುದೇ ಸಮಸ್ಯೆಯಾಗಿಲ್ಲ. ಲಸಿಕೆಯ ಮೇಲೆ ವಿಶ್ವಾಸವಿಡಿ. ಲಸಿಕೆ ಪಡೆದವರು ಮೈ ಮರೆಯದೇ, ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲೇ ಬೇಕು ಎಂದು...
ಹೆಚ್ಚಿನ ಸುದ್ದಿ

ಪ್ರೇಯಸಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾಳೆಂಬ ಕಾರಣಕ್ಕೆ ಕೊಲೆ ಮಾಡಿ ಗೋಡೆಯೊಳಗೆ ಹಾಕಿ ಮುಚ್ಚಿಟ್ಟಿದ್ದ ಕಿರಾತಕ-ಕಹಳೆ ನ್ಯೂಸ್

ಪಾಲ್ಘರ್ ಜಿಲ್ಲೆಯಲ್ಲಿ ಪ್ರೇಯಸಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾಳೆಂಬ ಕಾರಣಕ್ಕೆ ಸಿಟ್ಟಿಗೆದ್ದ ಪ್ರೇಮಿ ಆಕೆಯನ್ನು ಕೊಲೆ ಮಾಡಿ ಗೋಡೆಯೊಳಗೆ ಮರೆಮಾಚಿ ಇಟ್ಟಿದ್ದ ಘಟನೆ ನಡೆದಿದೆ. ಯುವಕನೋರ್ವ 32 ವರ್ಷದ ಯುವತಿಯನ್ನು 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಯುವಕನ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಇರಲಿಲ್ಲ. ಆದರೆ, ಯುವತಿ ತನ್ನನ್ನು ಮದುವೆಯಾಗುವಂತೆ ಯುವಕನನ್ನು ಒತ್ತಾಯಿಸುತ್ತಿದ್ದಳು. ಇದರಿಂದ ಕೋಪಗೊಂಡ ಆ ಯುವಕ ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ....
ಹೆಚ್ಚಿನ ಸುದ್ದಿ

ಪಡುಬಿದ್ರಿ ಠಾಣಾ ವ್ಯಾಪ್ತಿಯ ಅದಮಾರು ಕುಂಜೂರು ರೈಲ್ವೆ ಹಳಿಯ ಬಳಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ-ಕಹಳೆ ನ್ಯೂಸ್

ಪಡುಬಿದ್ರಿ : ಪಡುಬಿದ್ರಿ ಠಾಣಾ ವ್ಯಾಪ್ತಿಯ ಅದಮಾರು ಕುಂಜೂರು ರೈಲ್ವೆ ಹಳಿಯ ಬಳಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಈ ಮೃತದೇಹ ಬಾಗಲಕೋಟೆ ಮೂಲದ ಹುಲ್ಲಪ್ಪ ಆಗಿದ್ದು, ಈ ವ್ಯಕ್ತಿಗೆ ವಿವಾಹವಾಗಿ 2 ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ಕಾರಣವೇನೆಂದು ಇದುವರೆಗೂ ತಿಳಿದುಬಂದಿಲ್ಲ. ಆದರೆ ಮೃತದೇಹವನ್ನು ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ನಾಗರಾಜರ ಸಹಾಯದಿಂದ ಆಂಬುಲೆನ್ಸ್ ಮೂಲಕ ಶವವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ...
ಹೆಚ್ಚಿನ ಸುದ್ದಿ

ದಲಿತ ಯುವತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ-ಕಹಳೆ ನ್ಯೂಸ್

ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ದಲಿತ ಯುವತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯ ಕುರಿತು ಯುವತಿಯ ಕುಟುಂಬವು ತಮ್ಮ ಪ್ರದೇಶದ ಯುವಕರು ಕಿರುಕುಳ ಕೊಟ್ಟು ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಗಲ್ಲಿಗೇರಿಸಿದ್ದಾರೆಂದು ಆರೋಪಿಸಿದ್ದಾರೆ. 18 ಪ್ರಾಯದ ಪ್ರೀತಿ ಎಂಬ ಯುವತಿ ಶನಿವಾರ ಮಧ್ಯಾಹ್ನ ತರಕಾರಿಗಳನ್ನು ಖರೀದಿಸಲು ಮನೆಯಿಂದ ತೆರಳಿದ್ದವಳು ಮತ್ತೆ ಮನೆಗೆ ಹಿಂದಿರುಗಲಿಲ್ಲ. ಬಳಿಕ, ಆಕೆಯ ಕುಟುಂಬದ ಸದಸ್ಯರು ಬೆಲಾಟಾಲ್ ಪ್ರದೇಶದ...
ಹೆಚ್ಚಿನ ಸುದ್ದಿ

ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವ ಆರಂಭ-ಕಹಳೆ ನ್ಯೂಸ್

ಕುಂಬಳೆ: ಗುರುವಾರದಿಂದ ಇತಿಹಾಸದ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವ ಆರಂಭಗೊಂಡಿದ್ದು, ಕೋವಿಡ್ ಮಾನದಂಡಗಳೊಂದಿಗೆ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಯುತ್ತಿದೆ. ಹಾಗೆಯೇ ಶನಿವಾರ ಬೆಳಿಗ್ಗೆ 6.30 ರಿಂದ ಉತ್ಸವ, ಶ್ರೀಭೂತಬಲಿ, 10.30 ರಿಂದ ತುಲಾಭಾರ ಸೇವೆ, ಮತ್ತು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಹಾಗೂ ಸಂಜೆ 6.30ಕ್ಕೆ ದೀಪಾರಾಧನೆ, ವಿಶ್ವರೂಪದರ್ಶನ ರಾತ್ರಿ 7ರಿಂದ ನಡು ದೀಪೋತ್ಸವ, ದರ್ಶನಬಲಿ, ಪೂಜೆ ನಡೆಯಿತು. ಇಂದು ಬೆಳಿಗ್ಗೆ 6.30 ರಿಂದ ಉತ್ಸವ,...
ಹೆಚ್ಚಿನ ಸುದ್ದಿ

1992ರ ಡಿಸೆಂಬರ್ 6 ರಂದು ಅಯೋಧ್ಯೆಯ ವಿವಾದಾಸ್ಪದ ಕಟ್ಟಡದ ಬಳಿ ಕರಸೇವೆಯಲ್ಲಿ ಭಾಗವಹಿಸಿದ, ತನ್ನ ಅನುಭವದ ಮಾತುಗಳನ್ನಾಡಿದ ಶ್ರೀ ರಾಮನ ಭಕ್ತ ಶ್ರೀಯುತ ಅಣ್ಣು ಪೂಜಾರಿ ಕಾವು,ಮಾಡ್ನೂರು-ಕಹಳೆ ನ್ಯೂಸ್

1992 ರ ಡಿಸೆಂಬರ್ 6 ರಂದು ಅಯೋಧ್ಯೆಯ ವಿವಾದಾಸ್ಪದ ಕಟ್ಟಡದ ಬಳಿ ಕರಸೇವೆಯಲ್ಲಿ ಭಾಗವಹಿಸಿದ ಶ್ರೀಯುತ ಅಣ್ಣು ಪೂಜಾರಿ ಕಾವು,ಮಾಡ್ನೂರು ಇವರು ಶ್ರೀ ರಾಮನ ಭಕ್ತ. ನಿಧಿ ಸಮರ್ಪಣಾ ಅಭಿಯಾನದ ಸ್ವಯಂ ಸೇವಕರು ಇವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಕರಸೇವೆ ಮಾಡಿರುವ ಬಗ್ಗೆ ತಮ್ಮ ಅನುಭವಗಳನ್ನು ಹೆಮ್ಮೆಯಿಂದ ಹಂಚಿಕೊಂಡರು. ಹಾಗೂ ಅವರು ಅಯೋಧ್ಯೆಯಿಂದ ತಂದಿರುವ ಮಣ್ಣು, ಅಲ್ಲಿನ ಮರಳು, ಆ ಸಂದರ್ಭದ ಕೇಸರಿ ಶಾಲು, ಶಿಲೆಯ ತುಂಡು...
1 114 115 116 117 118 174
Page 116 of 174