ಕೇರಳ ಯುವತಿಯ ರೀಲ್ಸ್ ಹುಚ್ಚಿಗೆ ವ್ಯಕ್ತಿ ಬಲಿ : ಕೊನೆಗೂ ಯೂಟ್ಯೂಬರ್ ಶಿಂಜಿತಾ ಮುಸ್ತಫಾ ಅರೆಸ್ಟ್ – ಕಹಳೆ ನ್ಯೂಸ್
ಕೋಝಿಕೋಡ್: ಕೋಝಿಕೋಡ್‌ನ ಗೋವಿಂದಪುರದ ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಬುಧವಾರ ವ್ಲೋಗರ್ ಶಿಂಜಿತಾ ಮುಸ್ತಫಾ ಅವರನ್ನು ಬಂಧಿಸಿದ್ದಾರೆ. ಶಿಂಜಿತಾ ಬಸ್ಸಿನೊಳಗೆ ಅವಮಾನಿಸಿದ ನಂತರ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋಝಿಕೋಡ್ ವೈದ್ಯಕೀಯ ಕಾಲೇಜು ಪೊಲೀಸರ ಪ್ರಕಾರ, ಆರೋಪಿ ಮಹಿಳೆಯನ್ನು ವಡಕಾರದಲ್ಲಿ ಬಂಧಿಸಲಾಗಿದೆ. ಕೊಯಿಲಾಂಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ, ಶಿಂಜಿತಾ ಮುಸ್ತಫಾಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆಕೆಯ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಹಲವಾರು ಅಪರಾಧಗಳ ಆರೋಪ...







