ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್ನಲ್ಲಿ ಗಲಾಟೆ: ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬಿಗ್ಬಾಸ್ ಸ್ಪರ್ಧಿಯ ಮಾಜಿ ಪತಿ- ಕಹಳೆ ನ್ಯೂಸ್
ಬೆಂಗಳೂರು : ಬೆಂಗಳೂರಿನ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿನ ಖ್ಯಾತ 'ಬ್ಯಾಸ್ಟಿಯನ್' ಪಬ್ನಲ್ಲಿ ಗಲಾಟೆ ನಡೆದಿದೆ. ನಟಿ ಶಿಲ್ಪಾ ಶೆಟ್ಟಿ ಒಡೆತನದ ಈ ಐಷಾರಾಮಿ ಪಬ್ನಲ್ಲಿ ನಡೆದ ಘಟನೆಯೊಂದು, ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಗುರುವಾರ ತಡರಾತ್ರಿ ಸುಮಾರು 1.30ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಬ್ ಮುಚ್ಚುವ ಸಮಯದಲ್ಲಿ ಸರ್ವಿಸ್ ವಿಚಾರವಾಗಿ ಗಲಾಟೆಯಾಗಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಪಬ್ ಸಿಬ್ಬಂದಿ ಹಾಗೂ ಉದ್ಯಮಿ ಸತ್ಯ ನಾಯ್ಡು ನಡುವೆ...







